ಕರ್ನಾಟಕ

ಬೆಂಗಳೂರು ವಿ.ವಿ. ವಿದ್ಯಾರ್ಥಿಗಳಿಗೆ ಪದಕ ಪ್ರದಾನ

Pinterest LinkedIn Tumblr

bಬೆಂಗಳೂರು, ಜೂ. ೭- ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವಿಧ ವಿಭಾಗದಲ್ಲಿ ಅತಿಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಪಾಲ ವಜೂಬಾಯಿ ವಾಲಾ ಪದವಿ ಹಾಗೂ ಪದಕ ಪ್ರದಾನ ಮಾಡಿದರು.
ಕನ್ನಡ ಎಂ.ಎ.ಯಲ್ಲಿ 5 ಚಿನ್ನದ ಪದಕ ಪಡೆದ ಅರುಣ್ ಕುಮಾರ್, ನಾಲ್ಕು ಚಿನ್ನದ ಪದಕ ಪಡೆದ ಕವಿತಾ. ಸಿ, ಭೌತಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದ ಕೆ.ಜಿ.ಎಫ್‌ನ ಕೃಷ್ಣಮೂರ್ತಿ. ಎಸ್, ರಾಸಾಯನಶಾಸ್ತ್ರ ವಿಭಾಗದಲ್ಲಿ 5 ಚಿನ್ನದ ಪದಕ ಪಡೆದ ವನಿತಾ. ಆರ್, ಇತಿಹಾಸ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದ ಸಂಜನಾ. ಸಿ.ಟಿ, ಎಂ.ಎ. ಸಂಸ್ಕೃತದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಪೇಜೋಮೂರ್ತಿ. ಪಿ. ಸೇರಿದಂತೆ, ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ರಾಜ್ಯಪಾಲರು ಶುಭ ಕೋರಿದರು.
ಬೆಂಗಳೂರು ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಸೇರಿ 44,822 ಮಂದಿ ಪದವಿಗೆ ಅರ್ಹರಾಗಿದ್ದು, ಅದರಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ 20,341 ಪುರುಷ ವಿದ್ಯಾರ್ಥಿಗಳು, 24,318 ಮಹಿಳಾ ವಿದ್ಯಾರ್ಥಿಗಳು ಹಾಗೂ 163 ಮಂದಿ ಪಿಹೆಚ್‌ಡಿ, ಇನ್ನು ಉಳಿದ ವಿಷಯಗಳಲ್ಲಿ ಪಿಹೆಚ್‌ಡಿ ಪಡೆದುಕೊಂಡಿದ್ದಾರೆ.
ವಿವಿಧ ವಿಭಾಗಗಳಲ್ಲಿ 216 ಮಂದಿ ಚಿನ್ನದ ಪದಕ, 82 ಮಂದಿ ನಗದು ಬಹುಮಾನ, 91 ಮಂದಿ ಮೊದಲ ಱ್ಯಾಂಕ್ ಪಡೆದುಕೊಂಡಿದ್ದಾರೆ.
ಎಲ್ಲಾ ಱ್ಯಾಂಕ್ ಹಾಗೂ ಚಿನ್ನದ ಪದಕ ವಿಜೇತರಿಗೆ ರಾಜ್ಯಪಾಲರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಅನಿಲ್. ಡಿ. ಸಹಸ್ರಬುಧಿ, ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಬಿ. ತಿಮ್ಮೇಗೌಡ, ಕುಲಸಚಿವರಾದ ಕೆ.ಕೆ. ಸೀತಮ್ಮ, ನಿಂಗೇಗೌಡ ಸೇರಿದಂತೆ, ಹಲವರಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರು, ಸೆನೆಟ್ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

Comments are closed.