ಅಂತರಾಷ್ಟ್ರೀಯ

100 ಮಿಲಿಯನ್ ಡಾಲರ್ ಮೌಲ್ಯದ ಕಳವು ಮಾಲು ಹಿಂದಿರುಗಿಸಿದ ಅಮೆರಿಕ

Pinterest LinkedIn Tumblr

modi-america

ವಾಷಿಂಗ್ಟನ್: ದ್ವಿಪಕ್ಷೀಯ ಸಂಬಂಧಗಳು ಗಟ್ಟಿಯಾಗಿರಲು ಆಯಾ ದೇಶದ ಸಾಂಸ್ಕೃತಿಕ ಪರಂಪರೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಫಲವಾಗಿ ಅಮೆರಿಕವು ಭಾರತದ ಸುಮಾರು ಒಂದುನೂರು ಮಿಲಿಯನ್ (ದಶಲಕ್ಷ) ಮೌಲ್ಯದ ಕಲಾಕೃತಿಗಳನ್ನು ಇಂದು ನವದೆಹಲಿಗೆ ಹಿಂದಿರುಗಿಸಿದೆ.

ಇದರಲ್ಲಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದಿನ ಚಿನ್ನ, ಬೆಳ್ಳಿ ಕಲಾಕೃತಿಗಳನ್ನು ಹಿಂದಿರುಗಿಸಿದ್ದು, ಇವೆಲ್ಲ ಈ ಹಿಂದೆ ಭಾರತದಿಂದ ಕಳುವಾಗಿದ್ದ ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ. ಕೆಲವು ಬಾರಿ ಬದುಕಿರುವ ವ್ಯಕ್ತಿಗಳು ಮಾಡಲಾಗದ್ದನ್ನು ನಮ್ಮ ಪರಂಪರೆ ಸಾರುವ ವಿಗ್ರಹಗಳು ಮಾಡುತ್ತವೆ ಎಂದು ಮೋದಿ ಹೇಳಿದ್ದಾರೆ.

Comments are closed.