ಕರ್ನಾಟಕ

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷೇತರರು ಗೌಪ್ಯವಾಗಿ ಮತ ಚಲಾಯಿಸಿದರೆ ಮಾತ್ರ ಅರ್ಹತೆ

Pinterest LinkedIn Tumblr

voಬೆಂಗಳೂರು,ಜೂ.6-ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷೇತರರು ತಮ್ಮ ಮತವನ್ನು ತೋರಿಸಿ ಚಲಾಯಿಸಿದರೆ ಮತ ಅನರ್ಹಗೊಳ್ಳುತ್ತದೆ ಎಂದು ವಿಧಾನಸಭೆ ಉಸ್ತುವಾರಿ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಸ್.ಮೂರ್ತಿ ಹೇಳಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಗೌಪ್ಯವಾಗಿ ಮತದಾನ ಮಾಡಬೇಕು. ಯಾವ ಪಕ್ಷದ ಏಜೆಂಟರಿಗೂ ತಾವು ಹಾಕುವ ಮತವನ್ನು ತೋರಿಸುವಂತಿಲ್ಲ. ಅಕಸ್ಮಾತ್ ತೋರಿಸಿದರೆ ಆ ಮತ ಊರ್ಜಿತವಾಗುವುದಿಲ್ಲ ಎಂದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಶಾಸಕರು ತಮ್ಮ ಪಕ್ಷದ ಏಜೆಂಟರ್‌ಗಳಿಗೆ ತೋರಿಸಿ ತಮ್ಮ ಮತ ಚಲಾಯಿಸಬೇಕು. ಆಗ ಅವರ ಮತ ಅರ್ಹತೆ ಪಡೆಯುತ್ತದೆ ಎಂದು ತಿಳಿಸಿದರು. ಕುಟುಕು ಕಾರ್ಯಾಚರಣೆ ಸಂಬಂಧ ಟಿವಿಯ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ಇದೆ ಸಂದರ್ಭದಲ್ಲಿ ಹೇಳಿದರು. ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೆ ಶಾಸಕರ ಮತ ಖರೀದಿ ಸಂಬಂಧ ದೂರು ನೀಡಿದ್ದು, ಅದಕ್ಕೆ ಪೂರಕವಾದ ಮತ್ತಷ್ಟು ದಾಖಲೆಗಳನ್ನು ಇಂದು ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿರುವ ಆಡಿಯೋ ಕ್ಲಿಪಿಂಗ್ಸ್ , ಪೇಪರ್ ಕಟಿಂಗ್ಸ್‌ಗಳನ್ನು ಆಯೋಗಕ್ಕೆ ಸಲ್ಲಿಸಿದರು.

Comments are closed.