ಮನೋರಂಜನೆ

ಪತಿಯ ಸಿನೆಮಾಗಳಲ್ಲಿ ನಟಿಸುವುದಿಲ್ಲವೇಕೆ ಎಂಬುದಕ್ಕೆ ಕಾರಣ ನೀಡಿದ ವಿದ್ಯಾ ಬಾಲನ್

Pinterest LinkedIn Tumblr

Vidya_Balan_PTIಮುಂಬೈ: ಬಾಲಿವುಡ್ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್, ಆರೋಗ್ಯಕರ ಮದುವೆ ಸಂಬಂಧ ಉಳಿಸಿಕೊಳ್ಳುವುದಕ್ಕೆ ಪತಿಯ ಸಿನೆಮಾಗಳಲ್ಲಿ ಕೆಲಸ ಮಾಡದೇ ಇರುವುದು ಒಳ್ಳೆಯದು ಎಂದಿದ್ದಾರೆ
ತಮ್ಮ ಪತಿಯ ಹೊತೆಗೆ ಕೆಲಸ ಮಾಡುವುದಿಲ್ಲವೇಕೆ ಎಂಬ ಪ್ರಶ್ನೆಗೆ “ನಮ್ಮ ಮದುವೆಯ ಆರೋಗ್ಯಕರ ಸಂಬಂಧಕ್ಕಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡದಿರಲು ಪ್ರಯತ್ನಿಸುತ್ತಿದ್ದೇವೆ” ಎಂದಿದ್ದಾರೆ.
“ಈ ಕಾರಣದಿಂದ ಕೆಲವೊಮ್ಮೆ ಒಳ್ಳೆಯ ಸಿನೆಮಾಗಳು ಕೈತಪ್ಪಿ ಹೋಗುತ್ತವೆ ಆದರೆ ಇದು ಅವಶ್ಯಕ ತ್ಯಾಗ. ನಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನವನ್ನು ಬೆರೆಸಲು ನನಗೆ ಇಷ್ಟವಿಲ್ಲ” ಎಂದು ಕೂಡ ಅವರು ಹೇಳಿದ್ದಾರೆ.
“ಯಾರಾದರು ಜೋಡಿಗಳು ಒಟ್ಟಿಗೆ ಕೆಲಸ ಮಾಡಿದಾಗ ನನಗೆ ಅದ್ಭುತ ಎನಿಸುತ್ತದೆ. ನಾವಿಬ್ಬರೂ ಕೆಲಸದ ಬಗೆಗೆ ಒಟ್ಟಿಗೆ ಚರ್ಚಿಸುತ್ತೇವೆ ಆದರೆ ಒಟ್ಟಿಗೇ ಕೆಲಸ ಮಾಡದೆ ಇರುವುದು ನಮ್ಮ ಮದುವೆ ಸಂಬಂಧಕ್ಕೆ ಒಳ್ಳೆಯದು” ಎಂದಿದ್ದಾರೆ ವಿದ್ಯಾ.
ವಿದ್ಯಾ ತಮ್ಮ ಮುಂದಿನ ಚಿತ್ರ ” ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಿಭು ದಾಸಗುಪ್ತ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನವಾಜುದ್ದೀನ್ ಸಿದ್ಧಿಕಿ ಮ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Comments are closed.