ಕರ್ನಾಟಕ

ಪೊಲೀಸ್ ಪ್ರತಿಭಟನೆ ಹತ್ತಿಕ್ಕಲು ರಾತ್ರೋರಾತ್ರಿ ಪೊಲೀಸ್ ಸಂಘದ ಅಧ್ಯಕ್ಷ ಶಶಿಧರ್ ಅರೆಸ್ಟ್

Pinterest LinkedIn Tumblr

shashidhar

ಬೆಂಗಳೂರು: ಜೂನ್ 4ರಂದು ಪೊಲೀಸರ ಪ್ರತಿಭಟನೆಯನ್ನ ಹತ್ತಿಕ್ಕಲು ಒಂದಿಲ್ಲೊಂದು ಕಸರತ್ತು ಮಾಡ್ತಿದ್ದ ಗೃಹ ಇಲಾಖೆ, ಇದೀಗ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್‍ರನ್ನ ಬಂಧಿಸಿದ್ದಾರೆ.

ನಿನ್ನೆ ರಾತ್ರಿ 12-30 ಕ್ಕೆ ಯಲಹಂಕ ಉಪನಗರದ ಶಶಿಧರ್‍ರ ಮನೆಯಿಂದ ಪೊಲೀಸರು ಇವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ಸುಮಾರು ಮುವತ್ತಕ್ಕೂ ಹೆಚ್ಚು ಮಂದಿ ಪೊಲೀಸರು ಶಶಿಧರ್ ಮನೆಯ ಕಾಂಪೌಂಡ್ ಹಾರಿ ಒಳ ಹೋಗಿದ್ದಾರೆ. ಅಲ್ಲದೇ ಲಾಠಿಯಿಂದ ಬೊಗಳುತ್ತಿದ್ದ ನಾಯಿಯನ್ನ ಲಾಕ್ ಮಾಡಿದ್ದಾರೆ. ನಂತರ ಬಾಗಿಲು ತಟ್ಟಿ ಶಶಿಧರ್‍ರನ್ನ ಹೊರ ಕರೆದಿದ್ದಾರೆ. ಶಶಿಧರ್ ಹೊರ ಬರ್ತಿದ್ದಂತೆ ಬನ್ನಿ ನಮ್ಮ ಜೊತೆ ಎಂದು ಕರೆದುಕೊಂಡು ಹೋಗಿದ್ದಾರೆ.

ಇದನ್ನೆಲ್ಲಾ ಶಶಿಧರ್ ಮಗ ಫೋಟೊ ತೆಗೆದುದ್ದಕ್ಕೆ ಬಲವಂತವಾಗಿ ಮೊಬೈಲ್ ಕಸಿದಿದ್ದಾರೆ. ನಂತರ ಶಶಿಧರ್ ಅವರನ್ನ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅರೆಸ್ಟ್ ಮಾಡಲು ಬಂದ 30 ಮಂದಿಯ ನೇತೃತ್ವದ ಪೊಲೀಸ್ ತಂಡದಲ್ಲಿ ಎಸಿಪಿ ನಾಗರಾಜ್ ಇದ್ದರೆಂದು ಶಶಿಧರ್ ಪುತ್ರ ಹೇಳಿದ್ದಾರೆ.

ಎಸ್ಮಾ ಜಾರಿಯಾದ 24 ಘಂಟೆಯೊಳಗೆ ಶಶಿಧರ್ ಅವರನ್ನ ಬಂಧಿಸಲಾಗಿದೆ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸರು ಶಶಿಧರ್ ಅವರನ್ನು ಬಂಧಿಸಿ ಕೋರ್ಟ್‍ಗೆ ಹಾಜರು ಪಡಿಸಿದ್ದಾರೆ. ಸರ್ಕಾರದ ವಿರುದ್ಧ ಸಮರ ಸಾರುವುದು, ಒಳಸಂಚು ರೂಪಿಸುವ ಪ್ರಕರಣದಲ್ಲಿ ಶಶಿಧರ್ ಅವರನ್ನ ಬಂಧಿಸಲಾಗಿದೆ.

Comments are closed.