ಕರ್ನಾಟಕ

ರಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸದ ಭಾರತದ ವೃತ್ತಿಪರ ಬಾಕ್ಸರ್​ ವಿಜೇಂದರ್.

Pinterest LinkedIn Tumblr

Vijender Singh

ದೆಹಲಿ,ಜೂ.02: ಅಂತಾರಾಷ್ಟ್ರಿಯ ಬಾಕ್ಸಿಂಗ್ ಎಸೋಸಿಯೆಷನ್ ವೃತ್ತಿಪರ ಬಾಕ್ಸರ್ಗಳು ಒಲಿಂಪಿಕ್ನಲ್ಲಿ ಭಾಗವಹಿಸಲು ಈ ಬಾರಿ ಅವಕಾಶ ಮಾಡಿಕೊಟ್ಟಿದೆ. ಹೀಗಿದ್ದರೂ ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ರಿಯೋ ಒಲಿಂಪಿಕ್ಸ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ತಮ್ಮ ಬಿಡುವಿಲ್ಲದ ವೃತ್ತಿಪರ ಪಂದ್ಯಗಳ ವೇಳಾಪಟ್ಟಿಯಿಂದಾಗಿ ವಿಜೇಂದರ್ ಸಿಂಗ್ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ವಿಜೇಂದರ್ ಭಾಗವಹಿಸುವ ಸಾಧ್ಯತೆ ಇದೆ. ವೃತ್ತಿಪರ ಬಾಕ್ಸರ್ಗಳು ಒಲಿಂಪಿಕ್ನಲ್ಲಿ ಭಾಗವಹಿಸಲು ಅಂತಾರಾಷ್ಟ್ರಿಯ ಬಾಕ್ಸಿಂಗ್ ಎಸೋಸಿಯೆಷನ್ ಅವಕಾಶ ಮಾಡಿಕೊಟ್ಟಿರುವುದಕ್ಕೆ ಮಾಜಿ ಬಾಕ್ಸರ್ ಮೈಕ್ ಟೈಸನ್ ಖಂಡಿಸಿದ್ದರೆ, ಭಾರತೀಯ ನಟ ಅಮೀರ್ಖಾನ್ ಸ್ವಾಗತಿಸಿದ್ದಾರೆ.

Comments are closed.