
ಮಂಗಳೂರು : ಸಂಪ್ರದಾಯವನ್ನು ಮೀರಿ ಆಲದ ಮರದಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಹಾಗೂ ಅಶ್ವಿನಿ ಹೆಗ್ಡೆ ದಂಪತಿಯ 10ನೇ ವರ್ಷದ ವೈವಾಹಿಕ ಸಂಭ್ರಮಾಚರಣೆಯನ್ನು ಮಂಗಳೂರಿನ ಅಡು ಮರೋಳಿಯ ಸಂವೇದನಾ ಆಶ್ರಮದ ಮಕ್ಕಳೊಂದಿಗೆ ಆಚರಿಸಿಕೊಂಡರು.
ಮಕ್ಕಳ ಹಕ್ಕು ಹೋರಾಟಗಾರರ ಸಂಘ, ಹ್ಯೂಮನ್ ರೈಟ್ಸ್ ಫೆಡರೇಶನ್ ಹಾಗೂ ಪಿಯುಸಿಎಲ್ ಮಂಗಳೂರು ಇವರ ಸಹಕಾರದೊಂದಿಗೆ ಆಶ್ರಮದ ಮಕ್ಕಳೊಂದಿಗೆ ನಡೆದ “ಮದುವೆಯ ನೆನಪು ಮಕ್ಕಳೊಂದಿಗೆ” ಕಾರ್ಯಕ್ರಮದಲ್ಲಿ ವಕೀಲ ದಿನೇಶ್ ಹೆಗ್ಡೆ ದಂಪತಿ ಕೇಕ್ ಗೆ ಬದಲಾಗಿ ಕಲ್ಲಂಗಡಿಯನ್ನು ಕತ್ತರಿಸುವ ಮೂಲಕ ೧೦ನೇ ವರ್ಷದ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಆಚರಿಸಿಕೊಂಡರು.

ಈ ವೇಳೆ ಸ್ವರೂಪ ಅಧ್ಯಯನ ಕೇಂದ್ರ ಸಂಚಾಲಕ ಗೋಪಾಡ್ಕರ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಅಗಾಧ ಶಕ್ತಿಗಳನ್ನು ದುರ್ಬಲಗೊಳಿಸುವ ವ್ಯವಸ್ಥೆ ಸಮಾಜದಲ್ಲಿದೆ. ಇಂತಹ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದರು. ಅಲ್ಲದೇ ಆಶ್ರಮದ ಮಕ್ಕಳ ಜೊತೆ ಮದುವೆ ನೆನಪನ್ನು ಆಚರಿಸಿಕೊಂಡ ದಂಪತಿಗಳಿಗೆ ಅವರು ಶುಭ ಹಾರೈಸಿದರು.
ಇದೇ ವೇಳೆ ಆಶ್ರಮದಲ್ಲಿರೋ ಮಕ್ಕಳಿಗೆ ಸುಮಾರು ಐವತ್ತು ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಹಾಗೂ ಬಟ್ಟೆ ಬರೆಗಳನ್ನು ವಿತರಿಸಲಾಯಿತು..ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಹೋರಾಟ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಕಾಪೋರೇಷನ್ ಬ್ಯಾಂಕ್ ಸಿಇಒ ಬಿ.ಆರ್.ಭಟ್, ಮಾಹಿತಿ ಹಕ್ಕು ಹೋರಾಟ ಸಂಘದ ಸದಸ್ಯ ಕೃಷ್ಣ ನಾಯಕ್, ರೆನ್ನಿ ಡಿಸೋಜಾ, ವಕೀಲೆ ಅಕ್ಷತಾ ಮತ್ತಿತರು ಉಪಸ್ಥತರಿದ್ದರು.
Comments are closed.