ಕರ್ನಾಟಕ

ಟಾಪ್‌ 5 ರಾಂಕ್ ವಿಜೇತರಿಗೆ ಶುಲ್ಕ ಇಲ್ಲದೇ ಪ್ರವೇಶಾತಿ

Pinterest LinkedIn Tumblr

rankಬೆಂಗಳೂರು: ಸಿಇಟಿಯಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಎÇÉಾ ಏಳು ವಿಭಾಗಗಳಲ್ಲೂ ಟಾಪ್‌ ಐದು ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶುಲ್ಕ ಭರಿಸುವ ಸೌಲಭ್ಯ ಈ ವರ್ಷವೂ ಮುಂದುವರಿಯಲಿದೆ. ಈ
ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಕಾಲೇಜಿಗೆ ಸಿಇಟಿ ಸೀಟು ಮೂಲಕ ಪ್ರವೇಶ ಪಡೆದರೆ ಆ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕವನ್ನು ಸರ್ಕಾರವೇ ತುಂಬಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ಪ್ರಕಾಶ್‌ ಪಾಟೀಲ್‌ ಹೇಳಿದ್ದಾರೆ.

2013ರಲ್ಲಿ ಟಾಪ್‌ ಐದು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶುಲ್ಕ ಮರುಪಾವತಿ ಮಾಡುವ ಸೌಲಭ್ಯ ಆರಂಭಿಸಲಾಯಿತು. ಆರಂಭದಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ/ದಂತ ವೈದ್ಯಕೀಯಕ್ಕೆ ಮಾತ್ರ ಇದ್ದ ಈ ಸೌಲಭ್ಯವನ್ನು 2014ರಲ್ಲಿ ಎÇÉಾ ಕೋರ್ಸುಗಳಿಗೂ ವಿಸ್ತರಿಸಲಾಯಿತು.

ಉತ್ತರಪತ್ರಿಕೆ ಪ್ರತಿ ಲಭ್ಯ
ಸಿಇಟಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ವರ್ಷವೂ ಎÇÉಾ ಓಎಂಆರ್‌ ಉತ್ತರ ಪತ್ರಿಕೆಗಳ ಸ್ಕಾÂನ್‌ ಪ್ರತಿಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಪರಿಶೀಲನೆಗಾಗಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಓಎಂಆರ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಫ‌ಲಿತಾಂಶ ಅಥವಾ ಅಂಕದಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅದನ್ನು ಪ್ರಾಧಿಕಾರದ ಗಮನಕ್ಕೆ ತರಬಹುದು. ರ್‍ಯಾಂಕ್‌ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು
ಕೆಇಎ ಕಚೇರಿಗೆ ಇ-ಮೇಲ್‌ keauthority&kanic.in ಮೂಲಕ ಅಥವಾ ಖು¨ªಾಗಿ ಸಲ್ಲಿಸಿ ತಮ್ಮ ರ್‍ಯಾಂಕ್‌ ಪಡೆದುಕೊಳ್ಳಬಹುದು ಎಂದು ಕೆಇಎ ಅಧಿಕಾರಿಗಳು ತಿಳಿಸಿ¨ªಾರೆ.
-ಉದಯವಾಣಿ

Comments are closed.