
ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ಕೆಲ ದಿನಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ ಆಂಧ್ರಮೂಲದ ರಮ್ಯಾಕೃಷ್ಣ ಶವ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಪತಿ ಮಹಂತ್ ಪತ್ನಿ ರಮ್ಯಾ ಕೃಷ್ಣ ಶವವನ್ನು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತಂದು ಪುನಃ ಆಸ್ಟ್ರೇಲಿಯಾಕ್ಕೆ ತೆರಳಿದ್ದಾನೆ. ರಮ್ಯಾ ಕೃಷ್ಣ ಪೋಷಕರು ವರದಕ್ಷಿಣೆಗೆಗಾಗಿ ಮಗಳನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರೆ, ಪತಿ ಮಹಂತ್ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ.
ಆಸ್ಟ್ರೇಲಿಯಾದಲ್ಲಿ ಬಿಸಿನೆಸ್ ಮಾಡುತ್ತಿರುವ ಮಹಂತ್ ಜೊತೆ ಕೆಲಸ ವರ್ಷಗಳ ಹಿಂದೆ ರಮ್ಯಾಳ ಮದುವೆ ನಡೆದಿತ್ತು. ಈ ಮದುವೆ ಪೋಷಕರು ಚಿನ್ನ ಮತ್ತು 50 ಲಕ್ಷ ರೂ. ಹಣವನ್ನು ವರದಕ್ಷಿಣೆಯಾಗಿ ನೀಡಿದ್ದರು.
ಆದರೆ ಈಗ ಮಹಂತ್ ಬಿಸಿನೆಸ್ ನಷ್ಟವಾದ ಹಿನ್ನೆಲೆಯಲ್ಲಿ ಪತ್ನಿ ಜೊತೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಆದರೆ ಪತ್ನಿ ಪತಿಗೆ ಸಹಕಾರ ನೀಡದ್ದಕ್ಕೆ ಮಹಂತ್ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ರಮ್ಯಾ ಕೃಷ್ಣಳ ಪೋಷಕರು ಆರೋಪ ಮಾಡಿದ್ದಾರೆ.
Comments are closed.