
ಮಂಡ್ಯ: ಮದ್ದೂರಿನ ಕೆಸ್ತೂರು ಗ್ರಾಮ ಪಂಚಾಯತ್ಅಧ್ಯಕ್ಷನಿಂದ ಅತ್ಯಾಚಾರ ಯತ್ನ ಘಟನೆಯ ಬಗ್ಗೆ ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ಈ ವಿಚಾರ ನಿಜಕ್ಕೂ ಆಘಾತಕಾರಿಯಾಗಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷ ಡಿ ಗ್ರೂಪ್ ಸಹಾಯಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ.
ಇದೊಂದು ಅನಿರೀಕ್ಷಿತ ಘಟನೆಯಾಗಿದ್ದು, ನಾವೆಲ್ಲ ಮಹಿಳೆ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಎದ್ದುನಿಲ್ಲಬೇಕು. ಮಹಿಳೆಯ ಸಮಾನತೆ ಹಾಗೂ ಹಕ್ಕಿನ ಬಗ್ಗೆ ಹೋರಾಡಬೇಕು ಎಂದಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಗೆ ನ್ಯಾಯ ಸಿಗಬೇಕು ಎಂದಿದ್ದಾರೆ.
Comments are closed.