
ಮ೦ಗಳೂರು, ಮೇ. 26 : ಮಂಗಳೂರಿನ ಸುರತ್ಕಲ್ ಸಮೀಪದ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಬೀಚ್‌ನಲ್ಲಿ ಮೇ. 27, 28 ಹಾಗೂ 29ರಂದು ‘ಆಲ್ ಕಾರ್ಗೊ ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಸ್ಪರ್ಧೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಹಾಗೂ Kanara Surfing and Water sports promotion council, ರವರ ಸಹಯೋಗದೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರ, ಇವರ ಪ್ರಾಯೋಜಕತ್ಷದಲ್ಲಿ All Cargo Indian open of Surfing – 2016 (ಕರ್ನಾಟಕ ಸರ್ಫಿಂಗ್ ಫೆಸ್ಟಿವಲ್) ಆಯೋಜಿಸಲಾಗಿದೆ.
ಈ ಸರ್ಫಿಂಗ್ ಸ್ಪರ್ಧೆಗೆ ಅಂದಾಜು ರೂ. ೪೦ ಲಕ್ಷ ವೆಚ್ಚವಾಗಲಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರೂ.24 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು, ಉಳಿದ ರೂ.16. ಲಕ್ಷ ಗಳನ್ನು All Cargo Pvt. Ltd., ಹಾಗೂ ಇತರ ಪ್ರಾಯೋಜಕರಿಂದ ಸಂಗ್ರಹಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಅಂದಾಜು 90 ರಿಂದ 100ಸ್ಪರ್ಧಿಗಳು ಭಾಗವಹಿಸುವ ನೀರಿಕ್ಷೆಯಿದ್ದು, 86 ಸ್ಪರ್ಧಿಗಳು ತಮ್ಮ ಹೆಸರನ್ನು ನೊಂದಣಿ ಮಾಡಿರುತ್ತಾರೆ. ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಂದ ಸುಮಾರು 20 ರಿಂದ 25 ಸ್ಪರ್ಧಿಗಳು ಭಾಗವಹಿಸುವ ನೀರಿಕ್ಷೆಯಿದೆ.

ಇದು ಕರ್ನಾಟಕದಲ್ಲೇ ಪ್ರಥಮ : ದೇಶ ವಿದೇಶಗಳ ಸರ್ಫರ್ ಸಾಹಸಿಗಳು ಮಂಗಳೂರಿಗೆ
ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಈ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದ್ದು, ಇಲ್ಲಿ ನಡೆಯುವ ಮೂರು ದಿನಗಳ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ದೇಶಾದ್ಯಂತದ ಖ್ಯಾತ ಸರ್ಫರ್‌ಗಳು ಮಂಗಳೂರಿಗೆ ಆಗಮಿಸಲಿದ್ದಾರೆ.ಈ ಮೂಲಕ ಕರ್ನಾಟಕದ ಬೀಚ್‌ಗಳಲ್ಲಿ ಸರ್ಫಿಂಗ್ ಮತ್ತು ಸಾಹಸಮಯ ಜಲ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಜೊತೆಗೆ ದೇಶ ವಿದೇಶಗಳ ಸರ್ಫರ್ ಸಾಹಸಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸರ್ಫಿಂಗ್ ಉತ್ಸವದ ವಾತಾವರಣವನ್ನು ಒದಗಿಸಲಿದ್ದಾರೆ.
ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ಇದಾಗಿದ್ದು, 16 ವರ್ಷದೊಳಗಿನ, ಜೂನಿಯರ್ ಯುವಕರು- 17ರಿಂದ 22, ಹಿರಿಯ ಪುರುಷರು 22ರಿಂದ 28, ಮಾಸ್ಟರ್ಸ್ ಪುರುಷರು 28 ಮತುತ ಮೇಲ್ಪಟ್ಟವರು ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಅಂತಾರಾಷ್ಟ್ರೀಯ ಸರ್ಫರ್‌ಗಳಿಗಾಗಿ ಮುಕ್ತ ಪುರುಷರ ವಿಭಾಗದಲ್ಲಿಯೂ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಡೋನೇಶ್ಯದ ಸರ್ಫಿಂಗ್ ಕ್ಷೇತ್ರದ ಅಂತಾರಾಷ್ಟ್ರೀಯ ಚಾಂಪಿಯನ್‌ಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ವಿವಿಧ ವಿಭಾಗಗಳಿಗೆ ಒಟ್ಟು 6 ಲಕ್ಷ ರೂ. ವೌಲ್ಯದ ನಗದು ಬಹುಮಾನವನ್ನು ವಿತರಿಸಲಾಗುವುದು. ಈಗಾಗಲೇ 50 ಸರ್ಫರ್‌ಗಳು ಹೆಸರು ನೋಂದಾಯಿಸಿಕೊಂಡಿದ್ದು, ಮೇ 24ರವರೆಗೆ 100ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ.
ಕರಾವಳಿಯ ಸಮುದ್ರದಲ್ಲಿ ಐದರಿಂದ ಎಂಟು ಅಡಿಗಳವರೆಗೆ ಪುಟಿದೇಳುವ ಸಮುದ್ರದ ಅಲೆಗಳನ್ನು ಎದುರಿಸುತ್ತಾ ಸಾಗುವುದೇ ಸರ್ಫರ್‌ಗಳಿಗೆ ಸವಾಲಿನ ವಿಷಯವಾಗಿದೆ. ದೇಶದ ಕಿರಿಯ ಹಾಗೂ ಖ್ಯಾತ ಸರ್ಫರ್‌ಗಳಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಅನೀಶಾ ನಾಯಕ್ ಹಾಗೂ ಸಿಂಚನಾ ಗೌಡ ಮಹಿಳಾ ವಿಭಾಗದಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸಲಿದ್ದಾರೆ. ಇದರ ಜತೆಯಲ್ಲೇ ಪುರುಷರ ವಿಭಾಗದಲ್ಲಿ ಮುಲ್ಕಿಯ ದೀಕ್ಷಿತ್ ಸುವರ್ಣ ಹಾಗೂ ಕಿರಣ್ ಕುಮಾರ್ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
Comments are closed.