ಕರ್ನಾಟಕ

ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ

Pinterest LinkedIn Tumblr

dalith

ಅಸ್ಪಶ್ಯತೆಯನ್ನು ಕಾನೂನಿನ ಮೂಲಕ ಅಥವಾ ಕಠಿಣ ಶಿಕ್ಷೆಯ ಮೂಲಕ ತೆಗೆಯವುದಕ್ಕೆ ಅಸಾಧ್ಯ ಎಂದು ತಿಳಿದಿದ್ದು, ಪ್ರತಿಯೊಬ್ಬರು ತಮ್ಮ ಮನಸ್ಸು ಗಳಿಂದ ಅಸ್ಪಶ್ಯತೆಯನ್ನು ತೆಗೆದು ಹಾಕಲು ಮುಂದಾಗ ಬೇಕೆಂದು ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಕರೆ ನೀಡಿದರು. ಭಾರತ ಗೃಹಪ್ರವೇಶ ರಾಜ್ಯ ಸಮಿತಿ ಮಾಸ್ತಿ ಹೋಬಳಿಯ ತಿಪ್ಪಸಂದ್ರ ಗ್ರಾಮದಲ್ಲಿ ಅಸ್ಪೃಶ್ಯತೆ ನಿರ್ಮೂಲನಾ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ದಲಿತರ ಮನೆ ಗೃಹ ಪ್ರವೇಶ, ಸಹಪಂಕ್ತಿ ಭೋಜನ, ಸರ್ವಣೀಯರ ಮನೆ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆತ್ಮವಂಚನೆ ಮಾಡಿಕೊಂಡು ಕಾರ್ಯ ಕ್ರಮಗಳಲ್ಲಿ ಭಾಗ ವಹಿಸದೆ ಆತ್ಮಾವಲೋಕನ ಮಾಡಿಕೊಂಡು ಸ್ವಇಚ್ಛೆಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗ್ಗೊಂಡು ಸಮಾಜದ ಬದಲಾವಣೆಗೆ ಮುಂದಾಗಿ ಸಮ ಸಮಾಜದ ನಿರ್ಮಾಣ ಮಾಡಲು ಸಹಕರಿಸಿ ಎಂದರು. ಶಾಸಕ ಕೆ.ಎಸ್.ಮಂಜುನಾಥ್‌ಗೌಡ ಮಾತನಾಡಿ, ಅಸ್ಪೃಶ್ಯತೆ ನಿವಾರಣಾ ಕಾರ್ಯಕ್ರಮಗಳು ನಿಲ್ಲದೆ ಪದೇ ಪದೇ ನಡೆಯು ತ್ತಿದ್ದರೆ ಸಮಾಜದಲ್ಲಿನ ಅಸ್ಪಶ್ಯತೆ ಎಂಬ ಜಿಡ್ಡು ಕರಗಿಸು ವುದಕ್ಕೆ ಕಾರ್ಯಕ್ರಮಗಳು ನಡೆದಾಗ ಶೇ.100ರಷ್ಟು ನಿವಾರಣೆಯಾ ಗುವ ಸಾಧ್ಯತೆಗಳಿವೆ ಎಂದರು.

ದಲಿತ ಮುಖಂಡ ತಿಪ್ಪಸಂದ್ರ ಶ್ರೀನಿವಾಸ್ ಮನೆಯಲ್ಲಿ ಗೃಹ ಪ್ರವೇಶ ನಡೆದು ಸಹಪಂಕ್ತಿ ಭೋಜನ ಸೇವಿಸಿ ಸವರ್ಣೀಯ ಹರೀಶ್‌ಗೌಡ ಮನೆಯನ್ನು ದಲಿತರು ಪ್ರವೇಶ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್‌ದಾಸ್, ಎಸ್ಪಿ ದಿವ್ಯಾಗೋಪಿನಾಥ್, ಜಿ.ಪಂ ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯ ಹೆಚ್.ವಿ.ಶ್ರೀನಿವಾಸ್, ತಾ.ಪಂ ಅಧ್ಯಕ್ಷೆ ತ್ರಿವರ್ಣರವಿ, ಇಒ ಸಂಜೀವಪ್ಪ, ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ್, ಅಶ್ವಥ್‌ರೆಡ್ಡಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ವೈದ್ಯ, ಸ್ವರಾಜ್ ಅಭಿಯಾನದ ರಾಜ್ಯಾಧ್ಯಕ್ಷ ದೊಡ್ಡಿಹಳ್ಳಿ ನರಸಿಂಹಮೂರ್ತಿ, ಟಿ.ವಿಜಯ್‌ಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Comments are closed.