ರಾಷ್ಟ್ರೀಯ

ಕೇರಳದಲ್ಲಿ10 ವರ್ಷ ಹಳೆಯ ಡೀಸೆಲ್ ವಾಹನಕ್ಕೆ ನಿಷೇಧ

Pinterest LinkedIn Tumblr

diselತಿರುವನಂತಪುರಂ: ಹತ್ತು ವರ್ಷ ಹಳೆಯದಾಗಿರುವ ಡೀಸೆಲ್ ಇಂಜಿನ್ ವಾಹನಗಳನ್ನುಎನ್ ಜಿ ಟಿ ಕೇರಳದಲ್ಲಿ ನಿಷೇಧಿಸಿದೆ.

ಕೇರಳದಲ್ಲಿ ಬಳಕೆ ಮಾಡುವುದು ಮತ್ತು ನೋಂದಣಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ) ನಿಷೇಧಿಸಿದೆ. ಪ್ರಸ್ತುತ ನ್ಯಾಯಮಂಡಳಿಯ ಎರ್ನಾಕುಳಂ ಸ್ಪೆಷಲ್ ಸರ್ಕ್ಯೂಟ್ ಪೀಠದ ಉದ್ಘಾಟನಾ ದಿನವೇ ಈ ತೀರ್ಮಾನವನ್ನು ಘೋಷಿಸಿದೆ.

ಒಂದು ತಿಂಗಳಿನೊಳಗೆ ಈ ತೀರ್ಮಾನವನ್ನು ಜಾರಿಗೆ ತರಲು ನ್ಯಾಯಮಂಡಳಿ ಸರಕಾರಕ್ಕೆ ಒತ್ತಾಯಿಸಿದೆ.

ವಕೀಲರ ಸಂಘಟನೆಯಾದ ಲಾಯರ್ಸ್ ಎನ್ವಿರಾನ್ಮೆಂಟ್ ಅವೇರ್ನೆಸ್ ಫೋರಂ (ಲೀಫ್) ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿ ನ್ಯಾಯಮೂರ್ತಿ ಸ್ವತೇಂತ್ರ ಕುಮಾರ್ ನೇತೃತ್ವದ ಪೀಠ ಈ ತೀರ್ಮಾನ ಪ್ರಕಟಿಸಿದೆ. ಕೆಎಸ್ಆರ್ಟಿಸಿಗೂ ಈ ತೀರ್ಮಾನ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ 30 ದಿನಗಳ ನಂತರ ಹಳೇ ವಾಹನಗಳನ್ನು ರಸ್ತೆಗಿಳಿಸಿದರೆ ರು. 10,000 ದಂಡ ವಿಧಿಸಬೇಕೆಂದು ನ್ಯಾಯಮಂಡಳಿ ಒತ್ತಾಯಿಸಿದೆ.

Comments are closed.