ಚೆನ್ನೈ: ಇಲ್ಲಿನ ಮದ್ರಾಸ್ ವಿವಿಯ ಸೆನೆಟರಿ ಆಡಿಟೋರಿಯಂನಲ್ಲಿ ಸತತವಾಗಿ ಎರಡನೆ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೆ. ಜಯಲಲಿತಾ ಅವರು ಪ್ರಮಾಣ ವಚನ ಸ್ವೀಕರಿಸಿದರು.
ತಮಿಳುನಾಡಿನ ರಾಜ್ಯಪಾಲ ಕೆ. ರೋಸಯ್ಯ ಅವರು ಜಯಲಲಿತಾ ಅವರಿಗೆ ಪ್ರಮಾಣವಚನವನ್ನು ಬೋಧಿಸಿದರು. ಜಯಲಲಿತಾ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಜೆ. ಜಯಲಲಿತಾ ಅವರ ಜೊತೆ 28 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಡಿಎಂಕೆ ಮುಖಂಡ ಸ್ಟಾಲಿನ್, ಶಶಿಕಲಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ರಾಷ್ಟ್ರೀಯ
Comments are closed.