
ಗಾಂಧಿನಗರ (ಗುಜರಾತ್): ಗುಜರಾತಿನಲ್ಲಿ ತಾಪಮಾನದ ತೀವ್ರತೆಗೆ ರಸ್ತೆಗಳೂ ಕರಗತೊಡಗಿವೆ. ವಲ್ಸದ್ನಲ್ಲಿ ರಸ್ತೆಗೆ ಹಾಕಿದ ತಾರು ಕರಗಿ ಪಾದಚಾರಿಗಳು ರಸ್ತೆದಾಟಲು ಪರದಾಡಬೇಕಾಗಿ ಬಂದ ಅಪಾಯಕಾರಿ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವಲ್ಸದ್ನಲ್ಲಿ ಜನ ಶನಿವಾರ ರಸ್ತೆಗೆ ಇಳಿಯುತ್ತಿದ್ದಂತೆಯೇ ಶೂಗಳು, ಚಪ್ಪಲಿಗಳು ಬಿಸಿಗೆ ಕರಗುತ್ತಿರುವ ತಾರಿಗೆ ಅಂಟಿಕೊಳ್ಳ ತೊಡಗಿದವು. ಇದರಿಂದ ಚಕಿತರಾದ ಅವರು ತಾರಿನಿಂದ ಶೂ, ಚಪ್ಪಲಿ ಬಿಡಿಸಿಕೊಳ್ಳಲು ಯತ್ನಿಸಿದಾಗ ಕಾಲುಗಳಿಗೇ ತಾರು ಅಂಟಿಕೊಂಡ ಹಾಗೂ ತಲೆಯಲ್ಲಿ ಮೂಟೆ ಹೊತ್ತುಕೊಂಡ ಮಹಿಳೆ ವೇಗವಾಗಿ ರಸ್ತೆ ದಾಟಲಾಗದೆ ಮುಗ್ಗರಿಸಿ ಬಿದ್ದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ. ಮಹಿಳೆ ಬೀಳುವುದಷ್ಟೇ ಕೆಲವೇ ಸೆಕೆಂಡ್ ಮುಂಚೆ ಟ್ರಕ್ ಒಂದು ಅದೇ ರಸ್ತೆಯಾಗಿ ಚಲಿಸಿದ್ದೂ ವಿಡಿಯೋದಲ್ಲಿ ದಾಖಲಾಗಿದೆ.
ವಲ್ಸದ್ನಲ್ಲಿ ಶನಿವಾರ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಅಹಮದಾಬಾದಿನಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದೇಶಾದ್ಯಂತ ತೀವ್ರ ಬಿಸಿಗಾಳಿ ಬೀಸುತ್ತಿರುವ ವರದಿಗಳು ಬರುತ್ತಿದ್ದು ಶನಿವಾರ ಉತ್ತರ ಪ್ರದೇಶದಲ್ಲಿ ಬಲಿಯಾದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಚುರು ಮತ್ತು ಶ್ರೀಗಣಗಂಗಾನಗರದಲ್ಲಿ 49.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
Comments are closed.