ಬಾಂಗ್ಲಾದೇಶ: ಐಎಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಶುಕ್ರವಾರದಂದು ವೈದ್ಯರೊಬ್ಬರನ್ನು ಕಡಿದು ಕೊಲೆ ಮಾಡಿರುವ ಘಟನೆ ಕುಷ್ಟಿಯಾ ಎಂಬಲ್ಲಿ ನಡೆದಿದೆ.
ಸಾನೌರ ರೆಹ್ಮಾನ್ ಎಂಬ ವೈದ್ಯ ಮತ್ತು ಆತನ ಗೆಳೆಯನ ಶುಕ್ರವಾರದಂದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಇಬ್ಬರ ಮೇಲೂ ಮೇಲೆ ದಾಳಿ ನಡೆಸಿದ್ದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಸಾನೌರ್ ರೆಹ್ಮಾನ್ ಸ್ಥಳದ್ಲೇ ಸಾವನ್ನಪ್ಪಿದರೆ ಆತನ ಗೆಳೆಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯನ್ನು ಐಎಸ್ ಉಗ್ರರು ಹೊತ್ತುಕೊಂಡಿದ್ದು, ಸಾನೌರ್ ರೆಹ್ಮಾನ್ ಕ್ರೈಸ್ತ ಧರ್ಮದ ಬಗ್ಗೆ ಪ್ರಚಾರ ನಡೆಸುತ್ತಿದ್ದರು ಎನ್ನಲಾಗಿದೆ. ಐಸಿಸ್ ಉಗ್ರಗಾಮಿಗಳು ಬುದ್ಧಿ ಜೀವಿಗಳು, ಬ್ಲಾಗರ್ಗಳು ಹಾಗೂ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿಗಳನ್ನು ನಡೆಸುತ್ತಿದ್ದು, ಇತ್ತೀಚೆಗಷ್ಟೇ ಮುಸ್ಲಿಂ ಸೂಫಿ ಸಂತನನ್ನು ಹತ್ಯೆಗೈದಿದ್ದರು.
Comments are closed.