ಅಂತರಾಷ್ಟ್ರೀಯ

ಒಂದೇ ಫೋನಿನಲ್ಲಿ ಬಳಸಿ ಎರಡು ವಾಟ್ಸ್ ಆಪ್ ಅಕೌಂಟ್!

Pinterest LinkedIn Tumblr

coolpad_maxನವದೆಹಲಿ: ಸ್ಮಾರ್ಟ್ ಫೋನ್ ಯುಗದಲ್ಲಿ ಅಚ್ಚರಿಗಳ ಕೌತುಕ ಒಂದರ ನಂತರ ಒಂದರಂತೆ ಸ್ಪರ್ಧೆಗಿಳಿದಂತೆ ಈಗ ಒಂದೇ ಫೋನ್ನಲ್ಲಿ ಎರಡು ವಾಟ್ಸ್ ಆಪ್ ಅಕೌಂಟ್ಗಳ ಬಳಕೆ ಸಾಧ್ಯವಾಗಿದೆ.

ಕೂಲ್ಪ್ಯಾಡ್ ಮ್ಯಾಕ್ಸ್ ಎಂಬ ಹೆಸರಿನ ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನಿನಲ್ಲಿ ಒಂದೆ ಬಾರಿಗೆ ಎರಡು ವಾಟ್ಸ್ ಆಪ್ ಅಕೌಂಟ್ಗಳನ್ನು ಬಳಕೆ ಮಾಡಬಹುದು ಎಂಬುದು ವಿಶೇಷ. ಇದಲ್ಲದೆ ಫೋನ್ನಲ್ಲಿ ಎರಡು ಬಗೆಯ ಸ್ಟೋರೇಜ್ ಸವಲತ್ತು ಇದ್ದು ಅನುಕೂಲಕ್ಕೆ ತಕ್ಕಂತೆ ನಮ್ಮ ವ್ಯವಹಾರಿಕ ಮತ್ತು ಆಂತರಿಕ ಮಾಹಿತಿಗಳನ್ನು ಶೇಖರಿಸಿಬಹುದು.

ಇದಲ್ಲದೆ ಫೇಸ್ಬುಕ್, ಲೈನ್, ಬಿಬಿಎಮ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಬೇರೆ ಬೇರೆಯಾಗಿ ಮಾಡಬಹುದು. ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫೋನನ್ನು ವಿನ್ಯಾಸಗೊಳಿಸಲಾಗಿದೆ. ಸದ್ಯ ಅಮೇಜಾನ್ ಅಂತರ್ಜಾಲ ಮಾರುಕಟ್ಟೆಯಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯವಿದೆ.

Comments are closed.