ಕರ್ನಾಟಕ

ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಕೊಲೆ!

Pinterest LinkedIn Tumblr

472465-murder-copyರಾಮನಗರ: ಹುಡುಗಿಯರನ್ನು ಚುಡಾಯಿಸಿದರು ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು ಕೊಲೆಯಲ್ಲಿ ಅಂತ್ಯವಾದ ಘಟನೆ ತಾವರೆಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಂದಲಪುರ ಜನತಾ ಕಾಲೊನಿಯಲ್ಲಿ ಜರುಗಿದೆ.

ಗ್ರಾಮದ ನಿವಾಸಿ ಧನುಶ್‌ಕುಮಾರ್‌ (24) ಎಂಬ ಯುವ ಹತ್ಯೆಯಾಗಿದ್ದು, ಈತನ ಜೊತೆಗಿದ್ದ ಕಿರಣ್‌ಕುಮಾರ್‌, ಶರತ್‌, ಭರತ್‌, ಪುನೀತ್‌ ಎಂಬುವರಿಗೆ ಗಂಭಿರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ಬಿಜಿಎಸ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಕಿರಣ್‌ಕುಮಾರ್‌ ಹಾಗೂ ಸ್ನೇಹಿತರು ಹುಡುಗಿಯರನ್ನು ಚುಡಾಯಿಸುತ್ತಿದ್ದರು ಎಂಬ ಕಾರಣಕ್ಕೆ ಗುಂಪೊಂದು ಕಿರಣ್ ಕುಮಾರ್ ಮನೆಗೆ ನುಗ್ಗಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತು. ಘಟನೆಯಲ್ಲಿ ಧನುಶ್‌ ಸ್ಥಳದ್ಲಲೇ ಸಾವನ್ನಪ್ಪಿದ್ದಾನೆ, ಇತರ ಮೂವರು ಗಾಯಗೊಂಡರು. ಮಹಡಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಿರಣ್‌ಕುಮಾರ್‌ ಮಹಡಿಯಿಂದ ಜಿಗಿದು ಪರಾರಿಯಾಗಿದ್ದಾನೆ.
ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

Comments are closed.