ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಸಾಕಷ್ಟು ರೀತಿಯ ಭಾಗ್ಯಗಳನ್ನು ಕೊಟ್ಟಿದ್ದಾರೆ….ಎಲ್ಲಾ ಭಾಗ್ಯ ಕೊಟ್ಟಿರುವ ಸಿದ್ದರಾಮಯ್ಯ ಈಗ ದಲಿತ ಭಾಗ್ಯವನ್ನು ದಯಪಾಲಿಸಬೇಕು. ಗೃಹಸಚಿವ ಡಾ.ಜಿ.ಪರಮೇಶ್ವರ್ ಗೆ ಸಿಎಂ ಕುರ್ಚಿ ಬಿಟ್ಟುಕೊಡಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂವಿ ರಾಜಶೇಖರನ್ ಬಹಿರಂಗವಾಗಿ ಒತ್ತಾಯಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ, ದಿ.ರಾಜೀವ್ ಗಾಂಧಿ ಪುಣ್ಯತಿಥಿ ಆಚರಣೆ ಕಾರ್ಯಕ್ರಮದಲ್ಲಿ ರಾಜಶೇಖರನ್ ಈ ಹೇಳಿಕೆಯನ್ನು ನೀಡಿದ್ದಾರೆ.
ದಲಿತರಿಗೆ ರಾಜಕೀಯ ಶಕ್ತಿಯನ್ನು ನೀಡಿ ಎಂದು ದಿ.ರಾಜೀವ್ ಗಾಂಧಿ ಹೇಳಿದ್ದರು. ಹಾಗಾಗಿ ರಾಜೀವ್ ಗಾಂಧಿ ಅವರ ಆಶಯವನ್ನು ಸಿದ್ದರಾಮಯ್ಯನವರು ಈ ಮೂಲಕ ಈಡೇರಿಸಬೇಕು ಎಂದು ರಾಜಶೇಖರನ್ ಹೇಳಿದರು.
-ಉದಯವಾಣಿ
Comments are closed.