ಕರ್ನಾಟಕ

ಕಚ್ಚಲು ಮುಂದಾದ ನಾಯಿ ಬಗ್ಗೆ ಪ್ರಶ್ನಿಸಿದ್ದ ವ್ಯಕ್ತಿಯನ್ನೇ ಹೊಡೆದು ಕೊಂದರು…!

Pinterest LinkedIn Tumblr

dog

ಬಾಗಲಕೋಟೆ: ನಾಯಿ ಬೊಗಳುತ್ತೆ ಅಂತಾ ಮನೆಯವರಿಗೆ ಹೇಳಲು ಹೋದ ವ್ಯಕ್ತಿಯನ್ನ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ನರನೂರ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಮರಿಯಪ್ಪ ಮೆಟಗುಡ್ಡ ಕೊಲೆಯಾದ ವ್ಯಕ್ತಿ. ಮೃತ ಮರಿಯಪ್ಪ ಎಂಬ ವ್ಯಕ್ತಿ ರಸ್ತೆಯಲ್ಲಿ ತೆರಳುತ್ತಿರುವಾಗ ಭಜಂತ್ರಿ ಕುಟಂಬದವರ ನಾಯಿ ಬೊಗಳಲು ಅರಂಭಿಸಿದ್ದಲ್ಲದೇ, ಕಚ್ಚಲು ಮುಂದಾಗಿತ್ತು. ಹೀಗಾಗಿ ಆಕ್ರೋಶಗೊಂಡ ಮರಿಯಪ್ಪ ನಾಯಿಯ ಮಾಲೀಕರಿಗೆ ಹೇಳಲು ಹೋದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಅಷ್ಟರಲ್ಲಿ ಭಜಂತ್ರಿ ಕುಟುಂಬಸ್ಥರೆಲ್ಲಾ ಸೇರಿ ಮರಿಯಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮರಿಯಪ್ಪ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 3 ಅರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments are closed.