ಕರ್ನಾಟಕ

ಸಿಬಿಎಸ್‌ಇ ಬಾಲಕಿಯರ ಮೇಲುಗೈ; ದಕ್ಷಿಣ ಭಾರತ ಉತ್ತಮ ಸ್ಥಾನ

Pinterest LinkedIn Tumblr

CBSC

ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಹುಡುಗಿಯರದೇ ಮೇಲುಗೈ. ಸಿಬಿಎಸ್‌ಇ ತರಗತಿ ಪರೀಕ್ಷೆ ಫಲಿತಾಂಶಗಳು ಇಂದು ಹೊರಬಂದಿದ್ದು, ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಪಾಸು ಪ್ರಮಾಣ ಶೇ.78.85ರಷ್ಟಿದೆ. ವಿದ್ಯಾರ್ಥಿನಿಯರದು ಶೇ.88.58 ರಷ್ಟಿದೆ. ಪ್ರಾಂತ್ಯಾವಾರು ಫಲಿತಾಂಶದಲ್ಲಿ ದಕ್ಷಿಣ ಭಾರತ ಉತ್ತಮ ಸ್ಥಾನದಲ್ಲಿದೆ. ತಿರುವನಂತಪುರಂ ವಲಯದಲ್ಲಿ ಶೇ. 93.61 ಮೊದಲ ಸ್ಥಾನದಲ್ಲಿದ್ದರೆ ಅದನ್ನು ಹಿಂಬಾಲಿಸಿರುವ ತಮಿಳುನಾಡು ವಲಯದಲ್ಲಿ ಶೇ.92.63ರಷ್ಟು ಉತ್ತೀರ್ಣ ಪ್ರಮಾಣ ಇದೆ.

ಒಟ್ಟಾರೆ ಶೇ. 83.5
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶದಲ್ಲಿ ಏರಿಕೆಯಿಂದ ಒಟ್ಟಾರೆ ಫಲಿತಾಂಶ ಶೇ.೮೩.೫ರಷ್ಟಿದೆ. ಕಳೆದ ವರ್ಷ ಈ ಪ್ರಮಾಣ ಶೇ.82ರಷ್ಟಿತ್ತು. ಒಟ್ಟಾರೆ 10,65,179 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಪರೀಕ್ಷಾ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪರೀಕ್ಷೆಗಳು ಮಾರ್ಚ್ 1ರಿಂದ ಏಪ್ರಿಲ್ 26ರ ವರೆಗೆ ನಡೆದಿದ್ದವು. ಫಲಿತಾಂಶಗಳು ಎಲ್ಲ ಪ್ರಾಂತ್ಯಗಳಲ್ಲಿಯ ಮೂರು ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ.

Comments are closed.