ಮನೋರಂಜನೆ

ಲೂಸಿಯಾ ಥರ ಇರಲ್ಲ ಯೂಟರ್ನ್

Pinterest LinkedIn Tumblr

u-turn1ಪವನ್‌ಕುಮಾರ್ ಸಿನಿಮಾ ಅಂದ್ರೆ ನೆನಪಾಗೋದೇ ಲೂಸಿಯಾ. ಅದಕ್ಕಿಂತ ಹಿಂದಿನ ಸಿನಿಮಾ ಈಗ ನೆನಪಾಗೋದು ಕಡಿಮೆ. ಆದರೆ ಈ ಬಾರಿ ಯೂಟರ್ನ್ ಲೂಸಿಯಾ ತರಹ ಗೊಂದಲ ಹುಟ್ಟಿಿಸುವ, ಎರಡು-ಮೂರು ಬಾರಿ ನೋಡಿ ಅರ್ಥ ಮಾಡಿಕೊಳ್ಳಬೇಕಾದ ಸಿನಿಮಾ ಆಗಿರೋದಿಲ್ಲ ಅಂತ ಪವನ್ ಗ್ಯಾರಂಟಿಕೊಟ್ಟಿದ್ದಾರೆ. ಒಂದು ಸಸ್ಪೆನ್ ಥ್ರಿಲ್ಲರ್ ಕಥೆಯಿಂದ ಪ್ರೇಕ್ಷಕರನ್ನು ಥ್ರಿಲ್ಲಾಗಿಸುವ ಯೋಜನೆ ಹಾಕಿಕೊಂಡಿರುವ ನಿರ್ದೇಶಕ ಪವನ್‌ಕುಮಾರ್, ಕಥೆಯಲ್ಲಿ ಹೊಸ ಘಟನೆಗಳು ಕಣ್ಣಮುಂದೆ ಬರುವುದರಿಂದ ಆ ಫ್ರೆಶ್‌ನೆಸ್ ಉಳಿಸಿಕೊಳ್ಳಲು ಹೊಸ ಮುಖಗಳನ್ನೇ ಆಯ್ಕೆಮಾಡಿಕೊಂಡಿದ್ದಾರೆ. ರಂಗಿತರಂಗದ ರಾಧಿಕಾ ಚೇತನ್, ದಿಲೀಪ್‌ರಾಜ್ ಮಾತ್ರ ಚಿತ್ರದಲ್ಲಿ ಕಾಣಿಸೋ ಅನುಭವೀ ಮುಖಗಳು.

ಚಿತ್ರ ಒಂದು ಸಸ್ಪೆನ್ಸ್ ಥ್ರಿಲ್ಲರ್. ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಳ್ಳುತ್ತೆ. ಪ್ರೇಕ್ಷಕರನ್ನು ಲೂಸಿಯಾದಲ್ಲಿ ಕನ್ಫ್ಯೂಸ್ ಮಾಡಿದಂತೆ ಇಲ್ಲಿ ಮಾಡೋದಿಲ್ಲ. ಒಂದು ಬಾರಿಗೆ ಅರ್ಥವಾಗದಿದ್ದವರು ಸಿನಿಮಾ ಅರ್ಥವಾಗಲಿಲ್ಲ ಅಂತ ಹೇಳಿದ್ದರಿಂದ ಆಗ ಒಂದಷ್ಟು ಪ್ರೇಕ್ಷಕರನ್ನು ಕಳೆದುಕೊಳ್ಳುವಂತಾಗಿತ್ತು. ಆದರೆ ಇದು ಒಂದು ಪಕ್ಕಾ ಎಂಟರ್‌ಟೇನರ್. ಎರಡು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದೇವೆ. ಕೇವಲ ಡಬ್ಬಲ್ ರೋಡ್ ಫ್ಲೈವರ್ ಮತ್ತು ಕೆಲವು ಕಡೆ ಶೂಟ್ ಮಾಡಿದ್ದೇವೆ ಎನ್ನುವ ಕಾರಣಕ್ಕೆ ಖರ್ಚಿನ ವಿಚಾರದಲ್ಲಿ ರಾಜಿ ಆಗಿಲ್ಲ.

ಚಿತ್ರಕ್ಕಾಗಿ ರಾಕ್‌ಲೈನ್ ಸ್ಟುಡಿಯೋದಲ್ಲಿ 25 ಲಕ್ಷ ಖರ್ಚು ಮಾಡಿ ಪೊಲೀಸ್ ಸ್ಟೇಷನ್‌ನ ಸೆಟ್ ಹಾಕಿದ್ದೆವು, ಮಾಸ್ ಸಿನಿಮಾಗಳಲ್ಲಿರುವ ಹಾಡುಗಳಲ್ಲಿ ಸ್ಟಂಟ್‌ಗಳಿಲ್ಲ ಅಂದಮಾತ್ರಕ್ಕೆ ಚಿತ್ರದಲ್ಲಿ ಎಲ್ಲ ಕಮರ್ಷಿಯಲ್ ಅಂಶಗಳೂ ಇವೆಯಂತೆ. ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಈಗಾಗಲೇ ಚಿತ್ರದ ಪ್ರದರ್ಶನ ಆಗಿದ್ದು ವಿದೇಶಿಗರಿಂದ ಜೊತೆಗೆ ವಿದೇಶದಲ್ಲಿರುವ ಭಾರತೀಯರಿಂದಲೂ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದಯಂತೆ. ಇನ್ನು ಚಿತ್ರದ ಟಿಕೇಟ್‌ಗಳಿಗೆ ಆನ್‌ಲೈನ್‌ನಲ್ಲಿ ಭರ್ಜರಿ ಬೇಡಿಕೆ ಬಂದಿರುವ ಸಂತಸದ ವಿಚಾರವನ್ನೂ ಕೂಡ ಪವನ್ ಹಂಚಿಕೊಂಡರು.

ದಿಲೀಪ್‌ರಾಜ್,ರಾಧಿಕಾ ಚೇತನ್ ಮತ್ತು ಚಿತ್ರದ ಮುಖ್ಯಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಸೇರಿದಂತೆ ಎಲ್ಲರಿಗೂ ಚಿತ್ರದ ಪಾತ್ರಗಳು ಮತ್ತು ಕಥೆ ತೃಪ್ತಿಕೊಟ್ಟಿದ್ದು ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಆನಂದಿಸುತ್ತಾರೆ ಎನ್ನುವ ನಂಬಿಕೆ ಎಲ್ಲರದ್ದು. ಚಿತ್ರ ಈ ಶುಕ್ರವಾರ(ಮೇ20) ರಾಜ್ಯಾದ್ಯಂತ ಮತ್ತು ವಿದೇಶದಲ್ಲಿ ಹಲವು ಕಡೆ ಬಿಡುಗಡೆಯಾಗುತ್ತಿದೆ. ನಿರ್ಮಾಪಕ, ವಿತರಕ ಜ್ಯಾಕ್‌ಮಂಜು ಚಿತ್ರದ ವಿತರಣೆಯ ಜವಾಬ್ಧಾರಿ ಹೊತ್ತಿದ್ದಾರೆ.

Comments are closed.