
ಪ್ಯಾರಿಸ್: ಪ್ಯಾರಿಸ್‌ನಿಂದ ಕೈರೋಗೆ ಪ್ರಯಾಣಿಸುತ್ತಿದ್ದ ಈಜಿಪ್ಟ್ ಏರ್ ವಿಮಾನ ಗ್ರೀಕ್ ದ್ವೀಪದ ಕರ್ಪತೋಸ್‌ನಲ್ಲಿ ಪತನಗೊಂಡಿದೆ ಎಂದು ಈಜಿಪ್ಟ್‌ನ ಮೂಲಗಳು ಗುರುವಾರ ವರದಿ ಮಾಡಿವೆ.
ಎಂಎಸ್ 804 ಏರ್‌ಬಸ್ ಎ320 ವಿಮಾನ ಪ್ಯಾರಿಸ್ ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ 23:09 ಗಂಟೆಗೆ ಕೈರೋದತ್ತ ಪ್ರಯಾಣ ಬೆಳಸಿತ್ತು. ಈ ವಿಮಾನ ಸಮುದ್ರ ಮಟ್ಟದಿಂದ 37000 ಅಡಿ ಎತ್ತರಲ್ಲಿ ಹಾರುತ್ತಿದ್ದ ವೇಳೆ ರಾಡಾರ್ ನಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಮೆಡಿಟರೇನಿಯನ್ ಬಳಿ ಇದು ಸಂಪರ್ಕ ಕಡಿದುಕೊಂಡಿದ್ದು, ಇದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ ಎಂದು ಏರ್‌ಲೈನ್ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.
ಈ ವಿಮಾನಲ್ಲಿ ಒಟ್ಟು 56 ಪ್ರಯಾಣಿಕತರು ಮತ್ತು 10 ವಿಮಾನದ ಸಿಬ್ಬಂದಿಗಳು ಇದ್ದರು. ವಿಮಾನ 804 ನಲ್ಲಿ 30 ಈಜಿಪ್ಟ್ ನವರು, 15 ಫ್ರೆಂಚರು, ಇಬ್ಬರು ಇರಾಖ್ ಮತ್ತು ಅಲ್ಜೇರಿಯಾ, ಬ್ರಿಟನ್, ಬೆಲ್ಜಿಯಂ, ಕೆನಡಾ, ಚಾಡ್, ಕುವೈತ್, ಪೋರ್ಚುಗಲ್, ಸೌದಿ ಅರೇಬಿಯಾ ಮತ್ತು ಸುಡಾನ್‌ನ ಒಬ್ಬೊಬ್ಬ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ.
Comments are closed.