ಕನ್ನಡ ವಾರ್ತೆಗಳು

ಉದ್ಯಮಿಗೆ ಬೆದರಿಕೆ ಕರೆ : ಭೂಗತ ಪಾತಕಿ ವಿಕ್ಕಿ ಶೆಟ್ಟಿಗೆ ಉದ್ಯಮಿಗಳ ಮಾಹಿತಿ ನೀಡುತ್ತಿದ್ದ ವ್ಯಕ್ತಿ ಸೆರೆ

Pinterest LinkedIn Tumblr

arrest

ಮಂಗಳೂರು,ಮೇ.19: ಮಂಗಳೂರಿನ ಉದ್ಯಮಿಯೋರ್ವರಿಗೆ ಹಫ್ತಾ ಹಣಕ್ಕಾಗಿ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರ ಪುತ್ತೂರು ನಿವಾಸಿ ಶಶಿಧರ ಶೆಟ್ಟಿ (41) ಎಂದು ಗುರುತಿಸಲಾಗಿದೆ.

ದಿನಾಂಕ: 31-12-2015 ರಂದು ಪನಾಮ ನೇಚರ್ ಪ್ರೆಶ್ ಪ್ರವೆಟ್ ಲಿಮಿಟೆಡ್ ನ ಮಾಲೀಕರಾದ ವಿವೇಕ್ ರಾಜ್ ರವರ ಮೊಬೈಲ್ ಫೋನ್‌ಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿ ಎಂಬಾತನು ಕರೆಮಾಡಿ ಹಫ್ತಾ ನೀಡುವಂತೆ ಬೆದರಿಕೆ ಹಾಕಿರುವುದಲ್ಲದೇ ಕೊಡದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಈ ಪ್ರಕರಣದಲ್ಲಿ ವಿವೇಕ್ ರಾಜ್ ರವರ ಮಾಹಿತಿಯನ್ನು ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಗೆ ನೀಡಿದ ಆರೋಪದಲ್ಲಿ ಶಶಿಧರ ಶೆಟ್ಟಿ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ. ಸಿ.ಸಿ.ಬಿ ಇನ್ಸಪೆಕ್ಟರ್ ವೆಲೆಂಟಿನ್ ಡಿಸೋಜಾ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Comments are closed.