
ವಾಷಿಂಗ್ಟನ್: ಮಸಾಚ್ಯುಸೆಟ್ ಜನರಲ್ ಆಸ್ಪತ್ರೆ ವೈದ್ಯರು ಅಮೆರಿಕದ ಮೊದಲ ಶಿಶ್ನ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ ಈ ಮೂಲಕ ವೈದ್ಯಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಥಾಮಸ್ ಮೈನಿಂಗ್ (64)ರ ಪ್ರಾಯದ ವ್ಯಕ್ತಿಗೆ ಕಸಿ ಮಾಡಿದ್ದು, 15 ತಾಸು ಸತತವಾಗಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಕರು, ಡಾಕ್ಟರ್ಗಳ ಅವಿರತ ಪ್ರಯತ್ನ ಸಫಲವಾಗಿದೆ. ಮೈನಿಂಗ್ ಎಂಬ ವ್ಯಕ್ತಿ 2012 ರಲ್ಲಿ ಶಿಶ್ನದ ಕ್ಯಾನ್ಸರ್ಗೆ ತುತ್ತಾಗಿ ನಿಸ್ತೇಜಗೊಂಡಿದ್ದರು.
ಸಂಯುಕ್ತ ನಾಳಗಳ ರಂಧ್ರಗಳು ಮುಚ್ಚಿಹೋಗಿದ್ದರಿಂದ ಅವರಿಗೆ ಸಮಜಾತಿ ನಾಳ ಮತ್ತು ನರವ್ಯೂಹದ ರಚನೆ ಹೊಂದಿರುವ ಅಂಗವನ್ನು ಕಸಿ ಮಾಡುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿರುವ ಥಾಮಸ್ ತಮ್ಮ ಸಮಸ್ಯೆಗೆ ಮುಕ್ತಿ ನೀಡಿರುವ ಡಾಕ್ಟರ್ಗಳಿಗೆ ಮತ್ತು ಕುಟುಂಬಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
Comments are closed.