ಅಂತರಾಷ್ಟ್ರೀಯ

ವೈದ್ಯ ವಿಸ್ಮಯ, ಸಾವಿನ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!

Pinterest LinkedIn Tumblr

Miraculous

ಮಿಸ್ಸೌರಿ: ಕಾರ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಗರ್ಭಿಣಿಯನ್ನು ಕೂಡಲೇ ಶಸ್ತ್ರಚಿಕಿತ್ಸೆಗೊಳಪಡಿಸಿ ಮಗುವನ್ನು ಜೀವಂತವಾಗಿ ಹೊರತೆಗೆದ ಘಟನೆ ಅಮೆರಿಕದಲ್ಲಿ ನಡೆದಿದೆ!

ಅಚ್ಚರಿಯಾದರೂ ಇದು ಸತ್ಯ. ಮಿಸ್ಸೌರಿ ವೈದ್ಯರ ತಂಡವೊಂದು ಇಂತದ್ದೊಂದು ವಿಸ್ಮಯ ಎನ್ನುವಂಥ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ.

ನಡೆದಿರುವುದೇನು?

ಸಾರಾ ಇಲ್ಲರ್ ಹೆಸರಿನ ಗರ್ಭಿಣಿ ಪತಿ ಮ್ಯಾಟ್ ರೈಡರ್ ಜತೆಗೆ ಕಾರಿನಲ್ಲಿ ಕೇಪ್ ಗಿರಾರ್ಡ್ಎಯು ನಗರಲ್ಲಿರುವ ಪಾಪ್ಯುಲರ್ಬ್ಲುಪ್ ಆಸ್ಪತ್ರೆಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಸಾರಾ ಇದ್ದ ಕಾರಿಗೆ ಟ್ರಾಕ್ಟರ್ವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದಂಪತಿ ತೀವ್ರ ಗಾಯವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಸಾರಾ ಮತ್ತು ರೈಡರ್ ಅವರನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆ ಗೂ ಮಾರ್ಗ ಮಧ್ಯೆಯೇ ಸಾರಾ ಸಾವನ್ನಪ್ಪಿದ್ದರು.

ಆದರೆ ಗರ್ಭಿಣಿ ಸಾರಾ ಸಾವು ಖಚಿತ ಪಡಿಸಿಕೊಂಡ ವೈದ್ಯರ ತಂಡ ತಕ್ಷಣ ಶಸ್ತ್ರಚಿಕಿತ್ಸೆ ಮೂಲಕ ಶಿಶುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಮಗು ಎರಡುವರೆ ಕೆಜಿ ಇದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಸಾರಾ ಅವರ ಸಹೋದರಿ ಕಸಂಡ್ರಾ ಇಲ್ಲರ್ ಮಾತನಾಡಿದ್ದು, ಮಗು ಆಮ್ಲಜನಕ ಕೊರತೆ ಎದುರಿಸುತ್ತಿದೆ. ಈಗಾಗಲೇ ಕಣ್ಣು ತೆರೆದಿದೆ. ಆದರೆ ಮಗುವಿನ ಕುರಿತು ವೈದ್ಯರು ಯಾವುದೇ ಭರವಸೆ ನೀಡಿಲ್ಲ. ಮಗುವಿನ ಮೆದುಳಿಗೆ ಪೆಟ್ಟು ಬಿದ್ದಿದ್ದು, ಇನ್ನಷ್ಟು ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಮ್ಯಾಟ್ ರೈಡರ್ ಇದೀಗ ಚೇತರಿಸಿಕೊಳ್ಳುತ್ತಿದ್ದು, ಸಾವಿನಿಂದ ಪಾರಾಗಿದ್ದಾರೆ. ಇದೀಗ ಮಗುವಿನ ಚಿಕಿತ್ಸೆೆಗೆ ಹಣ ಬರಿಸಲು ವೆಬ್ ತಾಣವನ್ನು ರೂಪಿಸಿದ್ದು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

Comments are closed.