ಕರಾವಳಿ

ಮಹಾದಾಯಿ ಹೋರಾಟಕ್ಕೆ ದುಬೈ ಕನ್ನಡಿಗರ ಬೆಂಬಲ

Pinterest LinkedIn Tumblr

dubai

ದುಬೈ: ಕಳಸಾ ಬಂಡೂರಿ ಮಹಾದಾಯಿ ನದಿ ಯೋಜನೆಗಾಗಿ ಕರ್ನಾಟಕದಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದ ಹೋರಾಟಕ್ಕೆ ದುಬೈ ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ.

ದುಬೈನ ಬಸವ ಜಯಂತಿಯ ದಶಮಾನೋತ್ಸವ, ಲಿಂಗಾಯತ ಧರ್ಮ ಹಾಗೂ ಬಸವ ತತ್ವ ಪ್ರಸಾರಕ್ಕಾಗಿ ದ್ವಿತಿಯ ಬಾರಿಗೆ ಅರಬ್ ರಾಷ್ಟ್ರಗಳಲ್ಲಿ ವಿದೇಶ ಪ್ರವಾಸ ಕೈಗೊಂಡಿರುವ ಜಗದ್ಗುರುಗಳಿಗೆ ಅರಬ್ ದೇಶದ ಕನ್ನಡಿಗರ ಪರವಾಗಿ ದುಬೈ ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ ಎಂದು ಜಗದ್ಗುರುಗಳು ತಿಳಿಸಿದ್ದಾರೆ.

ದುಬೈ ಕನ್ನಡಿಗರು ಫಾರ್ಚ್ಯೂನ್ ಹೋಟೆಲ್ ನ ಸಭಾಂಗಣದಲ್ಲಿ ಎರ್ಪಡಿಸಿದ್ದ ಸಮಾರಂಭದಲ್ಲಿ ಜಗದ್ಗುರುಗಳು ಕರ್ನಾಟಕದಲ್ಲಿನ ನದಿಗಳ ಉಳವಿಗಾಗಿ, ಕುಡಿಯುವ ನೀರಿನ ಮಹತ್ವ ಹಾಗೂ ರೈತ ಹೋರಾಟಗಳ ಬಗ್ಗೆ, ಸರ್ಕಾರಗಳ ನಿರ್ಲಕ್ಷಗಳ ಬಗ್ಗೆ ಹಾಗೂ ಹೊರ ದೇಶದ ಕನ್ನಡಿಗರು ವಹಿಸಬೇಕಾಗಿರುವ ಪಾತ್ರದ ಬಗ್ಗೆ ಸಭೆಯ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಜಗದ್ಗುರುಗಳನ್ನು ದುಬೈ ಕನ್ನಡಿಗರು ಹಾಗೂ ಬಸವ ಸಮಿತಿಯಿಂದ ಸನ್ಮಾನಿಸಿ ದುಬೈ ಜನತೆ ಕರ್ನಾಟಕದ ಯಾವುದೇ ನದಿಗಳ ಪರ ಹೋರಾಟವನ್ನು ಬೆಂಬಲಿಸುತ್ತೇವೆ ಹಾಗೂ ಸಹಕರಿಸುತೆವೆ ಎಂದು ಘೊಷಿಸಿದರು.

ಈ ಸಂದರ್ಭದಲ್ಲಿ ನಿಜಗುಣ ಸ್ವಾಮೀಜಿ , ಲಂಡನ್ ನ ಡಾ. ನೀರಜ್ ಪಾಟಿಲ್ , ಚಿತ್ರ ನಟಿ ತಾರ , ಫಾರ್ಚ್ಯೂನ್ ಹೋಟೆಲ್ ನ ಮಾಲಕ ಪ್ರವೀಣ್ ಶೆಟ್ಟಿ, ಡಾ. ಶಂಭು ಬಳಿಗಾರ್, ವಸುಂಧರ ಹೀರೆಮಠ್ , ರುದ್ರಯ್ಯ ನವಲಿ ಮಠ , ಮಲ್ಲಿಕಾರ್ಜುನ್ , ಸಡನ್ ದಾಸ್, ಶಿವಕುಮಾರ್ ಮೊದಲಾದವರು ಉಪಸ್ತಿತರಿದ್ದರು.

Write A Comment