ನ್ಯೂಯಾರ್ಕ್ : ಈ ಸುದ್ದಿಯನ್ನು ಮಕ್ಕಳ ಕೈಗೆ ಮೊಬೈಲ್ ನೀಡಿರುವ ಪೋಷಕರೆಲ್ಲರೂ ಓದಲೇಬೇಕಾದುದ್ದು ಮತ್ತು ತೀವ್ರ ಕಳವಳ ಹುಟ್ಟಿಸುವಂತಹದ್ದು.14 ರ ಹರೆಯದ ಇಬ್ಬರು ಬಾಲಕಿಯರು ಮತ್ತು ಬಾಲಕನೊಬ್ಬ ಕ್ಲಾಸ್ ಗೆ ಚಕ್ಕರ್ ಹಾಕಿ ಫೇಸ್‌ಬುಕ್ ಲೈವ್ ಸೆಕ್ಸ್ ನಲ್ಲಿ ಕಾಣಿಸಿಕೊಂಡ ಅಘಾತಕಾರಿ ಘಟನೆ ಅಮೆರಿಕದ ಮಿಲ್ವಾಕಿ ಎಂಬಲ್ಲಿ ಜನವರಿ ತಿಂಗಳಿನಲ್ಲಿ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.
14 ರ ಹರೆಯದ ಇಬ್ಬರು ಹುಡುಗಿಯರು ಮತ್ತು 15 ರ ಹರೆಯದ ಬಾಲಕ ತರಗತಿಗೆ ಗೈರಾಗಿ ಫೇಸ್‌ಬುಕ್ ನಲ್ಲಿ ನೇರ ಲೈಂಗಿಕ ಕ್ರಿಯೆ ನಡೆಸಿದ್ದು ಈ ದೃಶ್ಯಾವಳಿ ಗಳನ್ನು ತಮ್ಮ ಸಹಪಾಠಿಗಳಲ್ಲದೇ ವಿಶ್ವದ ಅನೇಕ ಮಂದಿ ವೀಕ್ಷಿಸುವಲ್ಲಿ ಕಾರಣವಾಗಿದ್ದಾರೆ.
ದುರಂತವೆಂದರೆ ತರಗತಿಯಲ್ಲಿ ಆರೋಗ್ಯ ಸಂಬಂಧಿ ವಿಷಯದ ಪಾಠವಾಗುತ್ತಿರುವ ವೇಳೆಯಲ್ಲೇ ಮಕ್ಕಳು ಈ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ.
ಘಟನೆಯ ಕುರಿತಾಗಿ ಸರ್ಚ್ ವಾರಂಟ್ ಹೊರಡಿಸಿರುವ ಪೊಲೀಸರು ಇದೀಗ ಆ ದೃಶ್ಯಾವಳಿಗಳು ಪ್ರಸಾರವಾದ ದಿನದ ಎಲ್ಲಾ ವಿವರಗಳನ್ನು ನೀಡಲು ಫೇಸ್‌ಬುಕ್ ಬಳಿ ಕೇಳಿಕೊಂಡಿದ್ದು, ವೀಕ್ಷಿಸಿದವರ ಐಪಿಗಳನ್ನೂ ನೀಡಬೇಕೆಂದು ಕೇಳಿದ್ದಾರೆ.
ಇಬ್ಬರು ಹುಡುಗಿರ ವಿರುದ್ದ ಅಶ್ಲೀಲ ವಿಚಾರಗಳನ್ನು ಮಕ್ಕಳಿಗೆ ತೋರಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಾಲಕನನ್ನು ಶಂಕಿತ ಆರೋಪಿ ಪಟ್ಟಿಗೆ ಸೇರಿಸಲಾಗಿದೆ.
-ಉದಯವಾಣಿ