ರಾಷ್ಟ್ರೀಯ

ಮಲಿನ ನಗರವೆಂಬ ಕುಖ್ಯಾತಿಯಿಂದ ಹೊರಬಂದ ದೆಹಲಿ

Pinterest LinkedIn Tumblr

delhi-pollution-big

ದೆಹಲಿ: ದೇಶದ ರಾಜಧಾನಿ ದೆಹಲಿ ವಿಶ್ವದ ಗರಿಷ್ಠ ಮಾಲಿನ್ಯದ ಪಟ್ಟಿಯಿಂದ ಮುಕ್ತಿ ಹೊಂದಿದ್ದು ವಿಶ್ವದ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿದ್ದ ನಗರಗಳ ಪಟ್ಟಿಯಿಂದ ದೆಹಲಿ ಕಳಚಿಕೊಂಡಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ( ಡಬ್ಲ್ಯೂ ಹೆಚ್ ಒ) ನಗರ ವಾತಾವರಣ ಗುಣಮಟ್ಟ ಡೇಟಾಬೇಸ್ ನ್ನು ಗುರುವಾರದಂದು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ದೆಹಲಿ 11ನೇ ಸ್ಥಾನ ಕಾಯ್ದುಕೊಂಡಿದೆ.

ವಿಶ್ವದ 103 ದೇಶಗಳ 3,000 ನಗರಗಳ ಪೈಕಿ ದಿಲ್ಲಿಯ ವಾಯು ಗುಣಮಟ್ಟವು 2.5 ಪಿಎಂ (ಫೈನ್‌ ಪಾರ್ಟಿಕ್ಯುಲೇಟ್‌ ಪೊಲ್ಯುಶನ್‌) ಪ್ರಮಾಣದಲ್ಲಿದೆ. ಇದೇ ರೀತಿ ಪಿಎಂ 10 (ಕೋಯರ್ಸ್‌ ಪೊಲ್ಯುಶನ್‌ ಪಾರ್ಟಿಕಲ್ಸ್‌) ಪ್ರಮಾಣದ ಆಧಾರದಲ್ಲಿ ದಿಲ್ಲಿಯು 25ನೇ ಸ್ಥಾನದಲ್ಲಿದೆ ಎಂದು ಡೇಟಾ ಬೇಸ್ ವರದಿಯಿಂದ ತಿಳಿದುಬಂದಿದೆ.

2014 ರಿಂದ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಪಿಎಂ 2 .5 ಮಟ್ಟದ ಮಾಲಿನ್ಯ ಹೊಂದಿದ್ದ ನಗರಗಳ ಪೈಕಿ ದೆಹಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿದ್ದ ನಗರಗಳ ಪಟ್ಟಿಯಲ್ಲಿತ್ತು.

ಪ್ರಸ್ತುತ ಇರಾನ್ ನ ಝಬೊಲ್ ನಗರ ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ನಗರವಾಗಿದ್ದು ಪಿಎಂ 2 .5 ಮಟ್ಟದ ನಗರಗಳಲ್ಲಿ ಗ್ವಾಲಿಯರ್ ಹಾಗೂ ಅಲಹಾಬಾದ್ ಅನುಕ್ರಮವಾಗಿ ಎರಡನೇ ಹಾಗೂ ಮೂರನೇ ನಗರಗಳಾಗುವ ಸನಿಹದಲ್ಲಿವೆ. 6 ಹಾಗೂ 7 ನೇ ಸ್ಥಾನದಲ್ಲಿ ಪಾಟ್ನಾ ಹಾಗೂ ರಾಯ್ ಪುರ ಇದ್ದರೆ, ವಿಶ್ವದ 10 ಅತಿ ಹೆಚ್ಚು ಮಲಿನಕ್ಕೊಳಗಾದ ನಗರಗಳ ಪಟ್ಟಿಯಲ್ಲಿ ಭಾರತದ 4 ನಗರಗಳಿವೆ.

Write A Comment