ಮನೋರಂಜನೆ

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪ್ರಶ್ನೆ: ಸಂದರ್ಶನದಿಂದ ಹೊರನಡೆದ ಮೊಹಮದ್ ಅಜರುದ್ದೀನ್

Pinterest LinkedIn Tumblr

azharuddin

ನವದೆಹಲಿ: ಸಂದರ್ಶನದ ವೇಳೆ ನಿರೂಪಕ ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಅಸಮಾಧಾನ ಗೊಂಡು ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಎದ್ದು ಹೊರ ನಡೆದ ಘಟನೆ ವರದಿಯಾಗಿದೆ.

ತಮ್ಮ ಜೀವನ ಚರಿತ್ರೆ ಆಧಾರಿತ ಅಜರ್ ಚಿತ್ರದ ಪ್ರಮೋಷನ್ ಗಾಗಿ ಸಂದರ್ಶನಲ್ಲಿ ಅಜರುದ್ದೀನ್ ಭಾಗವಹಿಸಿದ್ದರು. ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ನಿರೂಪಕ ಪ್ರಶ್ನಿಸಿದ್ದರಿಂದ ಸಿಡಿಮಿಡಿಗೊಂಡ ಅಜುರುದ್ದೀನ್ ಅಲ್ಲಿಂದ ಎದ್ದು ಹೊರ ನಡೆದರು.

ವಾಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದರು ಪ್ರಯೋಜನವಾಗಲಿಲ್ಲ, ಇದೇ ವೇಳೆ ಮತ್ತೊಂದು ಚಾನೆಲ್ ನಲ್ಲಿ ಇದ್ದ ಮತ್ತೊಂದು ಸಂದರ್ಶನಕ್ಕೂ ಹಾಜರಾಗದೇ ಹೊರ ನಡೆದರು.

ಟೋನಿ ಡಿ ಸೋಜಾ ನಿರ್ದೇಶನದ ಅಜರ್ ಚಿತ್ರದಲ್ಲಿ ಇಮ್ರಾನ್ ಹಸ್ಮಿ, ಪ್ರಾಚಿ ದೇಸಾಯಿ ಮತ್ತು ನರ್ಗೀಸ್ ಫಕ್ರಿ ನಟಿಸಿದ್ದು, ಶುಕ್ರವಾರ ಸಿನಿಮಾ ತೆರೆ ಕಾಣಲಿದೆ.

Write A Comment