ಮನೋರಂಜನೆ

ವಿನೋದ್ ಕಾಂಬ್ಳಿ ಬಗ್ಗೆ ಹೊಗಳಿದ ಕಪಿಲ್ ದೇವ್…ಸಚಿನ್ ತೆಂಡೂಲ್ಕರ್ ಕುರಿತು ಹೇಳಿದ್ದೇನು…?

Pinterest LinkedIn Tumblr

vinod-and-sachin

ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗಿಂತ ಅವರ ಸಹಪಾಠಿ ವಿನೋದ್ ಕಾಂಬ್ಳಿ ಅತಿ ಹೆಚ್ಚು ಪ್ರತಿಭಾವಂತರಾಗಿದ್ದರು ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಇಬ್ಬರು ಒಟ್ಟಿಗೆ ವೃತ್ತಿ ಜೀವನ ಆರಂಭಿಸಿದ್ದರು. ಇಬ್ಬರು ಸಮಾನವಾದ ಪ್ರತಿಭೆಯುಳ್ಳವರಾಗಿದ್ದರು. ಆದರೆ ಸಚಿನ್ ಗಿಂತ, ಕಾಂಬ್ಳಿಗೆ ಹೆಚ್ಚು ಪ್ರತಿಭೆಯಿತ್ತು ಎಂದು ಹೊಗಳಿದ್ದಾರೆ.

ಆದರೆ ಕಾಂಬ್ಳಿ ಮನೆಯ ಹಿನ್ನೆಲೆ, ಸ್ನೇಹಿತರು, ಸಚಿನ್ ತೆಂಡೂಲ್ಕರ್ ಹಿನ್ನೆಲೆಗಿಂತ ವಿರುದ್ಧವಾಗಿತ್ತು ಎಂದು ಕಪಿಲ್ ಹೇಳಿದ್ದಾರೆ. ಸಚಿನ್ ಗೆ ಸಿಕ್ಕ ಅವಕಾಶ, ಪ್ರೋತ್ಸಾಹ, ವಿನೋದ್ ಕಾಂಬ್ಳಿಗೆ ಸಿಕ್ಕಿರಲಿಲ್ಲ.

ಸಚಿನ್ ಅವರಿಗೆ ಸೂಕ್ತ ಅವಕಾಶ ಸಿಕ್ಕಿದ್ದರಿಂದ ಅವರು ಸುಧೀರ್ಘವಾಗಿ 24 ವರ್ಷಗಳ ಕಾಲ ಕ್ರಿಕೆಟ್ ಜೀವನ ನಡೆಸಿದರು ಎಂದು ಮಾಜಿ ನಾಯಕ ಕಪಿಲ್ ಹೇಳಿದ್ದಾರೆ. ಪೋಷಕರು ತಮ್ಮ ಅಭಿರುಚಿಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದು ಕಪಿಲ್ ಸಲಹೆ ನೀಡಿದ್ದಾರೆ.

Write A Comment