ಕರ್ನಾಟಕ

ತಲೆ ಕತ್ತರಿಸಿ ಯುವಕನ ಭೀಕರ ಕೊಲೆ

Pinterest LinkedIn Tumblr

Crime-2-1ಬೆಂಗಳೂರು,ಮೇ.೮-ಯುವಕನೊಬ್ಬ ತಲೆ ಕತ್ತರಿಸಿ ಭೀಕರವಾಗಿ ಕೊಲೆಗೈದು ದೇಹನ್ನು ಬಿಟ್ಟು ತಲೆಯೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಎಲೆಕ್ಟ್ರಾನಿಕ್‌ಸಿಟಿಯ ಸುಭಾಷ್‌ನಗರದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್‌ಸಿಟಿಯ ನೈಸ್ ರಸ್ತೆಗೆ ಸಮೀಪದ ಸುಭಾಷ್‌ನಗರದ ನಿರ್ಜನ ಪ್ರದೇಶದಲ್ಲಿ ಬೆಳಿಗ್ಗೆ ೯ರ ವೇಳೆ ತಲೆಯಿಲ್ಲದ ಸುಮಾರು ೨೫ ವರ್ಷ ವಯಸ್ಸಿನ ಯುವಕನ ಪತ್ತೆಯಾಗಿದೆ.
ಬೇರೆ ಯಾವುದೋ ಕಡೆಯಿಂದ ಯುವಕನನ್ನು ಕರೆತಂದು ಸುಭಾಷ್‌ನಗರದ ನಿರ್ಜನ ಪ್ರದೇಶದಲ್ಲಿ ತಲೆ ಕತ್ತರಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು ಯುವಕನ ಗುರುತು ಪತ್ತೆಯಾಗದಿರಲಿ ಎನ್ನುವ ಕಾರಣಕ್ಕೆ ತಲೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಡಾ.ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎಲೆಕ್ಟ್ರಾನಿಕ್‌ಸಿಟಿ ಪೊಲಿಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment