
ನವದೆಹಲಿ: ಬಾಲಿವುಡ್ ಮಂದಿ ಯಾವಾಗ ಯಾವ ರೀತಿ ವರ್ತಿಸುತ್ತಾರೆ ಎಂಬುದು ದೇವರಿಗೂ ಗೊತ್ತಿಲ್ಲ. 25 ವರ್ಷದ ನಟಿ ರಿಚಾ ಛಡ್ಡಾಗೆ ಹೃತಿಕ್ ರೋಶನ್ ಅಮ್ಮನ ಪಾತ್ರದಲ್ಲಿ ಅಭಿನಯಿಸುವಂತೆ ಆಫರ್ ನೀಡಲಾಗಿತ್ತಂತೆ. ಈ ವಿಷಯವನ್ನು ಸ್ವತಃ ರೀಚಾ ಛಡ್ಡಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅಗ್ನಿಪಥ್ ಚಿತ್ರದಲ್ಲಿ ಹೃತಿಕ್ ಗೆ ಅಮ್ಮನಾಗುವಂತೆ ನಿರ್ದೇಶಕರೊಬ್ಬರು ನನಗೆ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಗ್ಯಾಂಗ್ಸ್ ಆಫ್ ವಾಸ್ಸೇಪುರ್ ಚಿತ್ರದಲ್ಲಿ ನಾನು ನವಾಜುದ್ದೀನ್ ಸಿದ್ಧಕಿ ಅಮ್ಮನ ಪಾತ್ರದಲ್ಲಿ ಅಭಿನಯಿಸಿದ್ದೆ. ಹೀಗಾಗಿ ಹೃತಿಕ್ ಗೂ ಅಮ್ಮನಾಗುವಂಕೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದಾರೆ.