
ಶ್ರೀಕಂಠ ಸಿನಿಮಾ ಚಿತ್ರೀಕರಣ ಮುಗಿದಿದೆ ಇಲ್ಲಿಯವರೆಗಿನ ಚಿತ್ರೀಕರಣ ತೃಪ್ತಿತಂದಿದೆ ಸಿನಿಮಾ ಕತೆಗೆ ತಕ್ಕಂತೆ ಮೂಡಿಬಂದಿದೆ ಜೂನ್ ಕೊನೆಯಲ್ಲಿ ಮೂರು ಹಾಡುಗಳ ಚಿತ್ರೀಕರಣ ಮುಗಿಸಿದರೆ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತದೆ ಎನ್ನುತ್ತಾರೆ ನಿರ್ದೇಶಕ ಮಂಜುಸ್ವರಾಜ್.
ಚಿತ್ರೀಕರಣ ಸಾಗಿ ಮುಗಿದ ರೀತಿಯನ್ನು ನೋಡಿದರೆ ಇದೊಂದು ಒಳ್ಳೆಯ ಸಿನಿಮಾ ಆಗುವುದರಲ್ಲಿ ಅನುಮಾನವಿಲ್ಲ ಅಂತಿಮ ರೂಪ ನೀಡಿದ ಸಿನಿಮಾದ ಕೆಲಸಗಳನ್ನು ನೋಡಿದ ಗಾಂಧಿನಗರದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಶ್ರೀಕಂಠ ಯಶಸ್ವಿಯಾಗಲಿದ್ದಾನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಓಂ ಚಿತ್ರದ ನಂತರ ಅಂಬಾಸಿಡರ್ ಕಾರನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದ ನಿರ್ಮಾಪಕ ಮನು ನನಗೂ ನಿರ್ದೇಶಕರಿಗೆ ಶ್ರೀಕಂಠ ಚಿತ್ರ ಮಾಡುವ ಕನಸಿತ್ತು ಅದರಲ್ಲಿ ಶ್ರೀಕಂಠನ ಪಾತ್ರವನ್ನು ಶಿವಣ್ಣ ಬಿಟ್ಟರೆ ಬೇರೆ ಯಾರಿಗೂ ಮಾಡಲು ಸಾಧ್ಯವಿರಲಿಲ್ಲ ಚಿತ್ರದಲ್ಲಿ ಅವರು ಅಭಿನಯಿಸಲು ಒಪ್ಪಿಕೊಂಡಿದ್ದರಿಂದ ನಮ್ಮ ಕನಸು ನನಸಾಗಿದೆ ಇಲ್ಲದಿದ್ದರೆ ಕನಸು ನನಸಾಗದೇ ಉಳಿಯುತ್ತಿತ್ತು ಎಂದು ಹೇಳಿಕೊಂಡರು.
ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಅವರು ಶಿವಣ್ಣ ಅವರ ಸಿನಿಮಾಕ್ಕೆ ನಾನು ಸಂಗೀತ ನೀಡಿರುವುದು ನನಗಿನ್ನೂ ಹೌದಾ ಎನಿಸಿದೆ ಸಂಗೀತವನ್ನು ಶಿವಣ್ಣ ಅವರು ಒಪ್ಪಿರುವುದು ಖುಷಿತಂದಿದೆ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ ತುಂಬಾ ಪರಿಶ್ರಮ ಪಟ್ಟು ಸಿನಿಮಾ ಮಾಡಿದ್ದೇನೆ.
ಚಿತ್ರದಲ್ಲಿ ಐದು ಹಾಡುಗಳಿವೆ ಯೇಸುದಾಸ್ ಅವರಿಂದ ಹಾಡೊಂಡನ್ನು ಹಾಡಿಸುವ ಯೋಜನೆ ಹಾಕಿಕೊಂಡಿದ್ದೇವೆ ಮೆಲೋಡಿಯಾಗಿರುವ ಹಾಡುಗಳು ಪ್ರೇಕ್ಷಕರಿಗೆ ಖುಷಿಕೊಡಲಿವೆ ಎನ್ನುವ ವಿವರ ನೀಡಿದರು.
ನಾಯಕ ಶಿವಣ್ಣ ಅವರು ಶ್ರೀಕಂಠನಲ್ಲಿ ಆಡಂಬರವಿಲ್ಲ ಸಣ್ಣ ದೃಶ್ಯವನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ ಯಾವುದೂ ನಿರುಪಯುಕ್ತ ಎನಿಸಿಲ್ಲ ವರ್ಷಗಳ ನಂತರ ಶ್ರೀಕಂಠ ಸಿನಿಮಾ ನನಗೆ ನೆಮ್ಮದಿ ತಂದಿದೆ ವಿಶ್ವಾಸದಿಂದ ಸಿನಿಮಾ ಮಾಡಿದ್ದೇನೆ ಎನ್ನುತ್ತಾರೆ.
ವಾಸ್ತವಕ್ಕೆ ಹತ್ತಿರವಾದ ಪಾತ್ರ ನನ್ನದು ಸಾಮಾನ್ಯ ಕುಟುಂಬ ಶ್ರೀಕಂಠ ನಾನು ಪ್ರೀತಿಯಂದ ಸಿನಿಮಾ ಮಾಡಿದ್ದೇನೆ ಕಥೆ ಹೇಳುವ ರೀತಿ ಸಿನಿಮಾದಲ್ಲಿ ಚೆನ್ನಾಗಿದೆ ಎಂದರು ಶಿವಣ್ಣ.