ಮನೋರಂಜನೆ

ಡೇಟಿಂಗ್‌ಗೆ ಆಹ್ವಾನಿಸಿದ ಡೆಲ್ಲಿ ಹುಡುಗಿ! ಯುವತಿಗೆ ಬಿಲ್ ನೀವು ಕೊಟ್ಟರೆ ಮಾತ್ರ ಡೇಟಿಂಗ್ ಗೆ ಬರುವೆ ಎಂದ ಗೇಯ್ಲ್

Pinterest LinkedIn Tumblr

Chris Gayle

ನವದೆಹಲಿ: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿರುವ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಗೆ ಟ್ವೀಟರ್ ನಲ್ಲಿ ದೆಹಲಿ ಹುಡುಗಿ ಡೇಟಿಂಗ್ ಆಹ್ವಾನ ನೀಡಿದ್ದಾಳೆ.

ಇದಕ್ಕೆ ಪ್ರತಿಯಾಗಿ ಗೇಯ್ಲ್ ಸಹ ಷರತ್ತಿನ ಮೇಲೆ ಡೇಟಿಂಗ್ ಗೆ ಬರುವುದಾಗಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಏನ್ನಪ್ಪ ಅಂತೀರಾ…

ಗೇಯ್ಲ್: ಡೇಟಿಂಗ್ ಬರ್ತೀನಿ, ಆದರೆ ಬಿಲ್ ನೀವೇ ಕೊಡಬೇಕು. ಆಗ ನಿಮ್ಮ ಜತೆ ಬರುವುದಕ್ಕೆ ನನಗೆ ಅಭ್ಯಂತರವಿಲ್ಲ.

ದೆಹಲಿ ಯುವತಿ: ಬಿಲ್ ತಾನೇ ಕೊಡುವುದಾಗಿ ಒಪ್ಪಿಕೊಂಡಿದ್ದು, ಇದಕ್ಕೆ ಒಂದು ಷರತ್ತು ಹಾಕಿದ್ದಾಳೆ. ಅದೇನಪ್ಪ ಅಂತೀರಾ…ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಶತಕ ಸಿಡಿಸಿಬೇಕು ಎಂದು ಕೇಳಿದ್ದಾಳೆ.

ಸದ್ಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಗೇಯ್ಲ್ ಫ್ಲಾಫ್ ಆಗಿದ್ದಾರೆ. ಅವರ ಬ್ಯಾಟ್ ನಿಂದ ಬಿರುಸಿನ ಹೊಡೆತಗಳು ಹೊರ ಬಂದಿಲ್ಲ. ಅಲ್ಲದೆ ಆಡಿರುವ ಯಾವುದೇ ಪಂದ್ಯದಲ್ಲಿ ಎರಡಂಕಿ ದಾಟಿಲ್ಲ.

Write A Comment