ಸೇಲಂ- ಚುನಾವಣಾಧಿಕಾರಿಯಂತೆ ಫೋಸ್ ಕೊಟ್ಟು ಹಣ ವಸೂಲಿಗೆ ಯತ್ನಿಸುತ್ತಿದ್ದ ವಜಾಗೊಂಡ ತಾಲೂಕು ಕಚೇರಿ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕು ಕಚೇರಿಯಲ್ಲಿ ಸಹಾಯಕನಾಗಿದ್ದ 29 ವರ್ಷದ ಪ್ರಭು ಎಂಬುವನನ್ನು ಉದ್ಯೋಜಗದಿಂದ ವಜಾ ಮಾಡಲಾಗಿತ್ತು. ಈ ಪ್ರಬು ವೀರನಂ ಪ್ರದೇಶದಲ್ಲಿದ್ದ ಹೋಲ್ಸೇಲ್ ಲಿಕ್ಕರ್ ಮಾರಾಟ ಮಳಿಗೆಯೊಂದಕ್ಕೆ ಹೋಗಿ ತಾನು ಚುನಾವಣಾಧಿಕಾರಿಯೆಂದೂ, ಲೆಕ್ಕ ತೋರಿಸಬೇಕೆಂದೂ ಆದೇಶಿಸಿದ್ದಾನೆ. ಲೆಕ್ಕವನ್ನೆಲ್ಲ ಪರಿಶೀಲಿಸಿದಂತೆ ಮಾಡಿ ನಂತರ ಹಣ ಕೇಳಿದ್ದಾನೆ.
ಇದರಿಂದ ಅನುಮಾನಗೊಂಡ ಲಿಕ್ಕರ್ ಶಾಪ್ನವನು ಐಡಿ ಕಾರ್ಡ್ ಕೇಳಿದ್ದಾನೆ. ಐಡಿ ಕಾರ್ಡ್ ಇಲ್ಲದ್ದರಿಂದ ಕಕ್ಕಾಬಿಕ್ಕಿಯಾದ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ.