ರಾಷ್ಟ್ರೀಯ

ಗುಜರಾತ್ ಪೆಟ್ರೋಲಿಯಂ ಅವ್ಯವಹಾರ : ರಾಜ್ಯಸಭೆಯಲ್ಲಿ ಕೋಲಾಹಲ, ಮುಂದೂಡಿಕೆ

Pinterest LinkedIn Tumblr

petrolನವದೆಹಲಿ,ಮೇ2-ಗುಜರಾತ್‍ನ ಗ್ಯಾಸ್ ಪ್ರಜೆಕ್ಟ್‍ನಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ ಎಂಬ ಸಿಎಜಿ ವರದಿಯ ಹಿನ್ನಲೆಯಲ್ಲಿ ಕೋಲಾಹಲ ಉಂಟಾದ ಕಾರಣ ರಾಜ್ಯಸಭೆಯ ಕಲಾಪವನ್ನು ಪದೇ ಪದೇ ಮುಂದೂಡಬೇಕಾಯಿತು. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಸಿಎಜಿ ಬಿಡುಗಡೆ ಮಾಡಿರುವ ವರದಿಯನ್ನು ಪ್ರಸ್ತಾಪಿಸಿದ ವಿಪಕ್ಷ ಕಾಂಗ್ರೆಸ್, ಈ ಅಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿತು. ಗುಜರಾತ್‍ನ ರಾಜ್ಯ ಪೆಟ್ರೋಲಿಯಂ ಕಾಪೆರ್Çೀರೇಷನ್‍ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಿಎಜಿ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದುಬಂದಿದೆ. ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿ ಗದ್ದಲ ಎಬ್ಬಿಸಿತು.

ಈ ವೇಳೆ ಸಭಾಧ್ಯಕ್ಷರು ಸದನವನ್ನು ಅರ್ಧ ಗಂಟೆ ಮುಂದೂಡಿದರು. ನಂತರ ಸಭೆ ಸಮಾವೇಶಗೊಂಡಾಗಲೂ ಇಡೀ ಪರಿಸ್ಥಿತಿ ಪ್ರತಿಧ್ವನಿಸಿತು. ವಿಧಾನಪರಿಷತ್ ಸಭಾಧ್ಯಕ್ಷರು ಮತ್ತೆ ಗದ್ದಲ ಆರಂಭವಾದಾಗ ಕಲಾಪವನ್ನು ಮುಂದೂಡಿದರು. ಮತ್ತೂ ಇದೇ ಪರಿಸ್ಥಿತಿ ಮುಂದುವರೆದಾಗ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಕಾಂಗ್ರೆಸ್ ವಿರುದ್ದ ಬಿಜೆಪಿ ಅಗಸ್ಟಾ ವೆಸ್ಟ್‍ಲ್ಯಾಂಡ್ ಹಗರಣದ ಅಸ್ತ್ರ ಬಳಿಸಿ ಈಗ ಬಿಜೆಪಿ ವಿರುದ್ದ ಗುಜರಾತ್ ಪೆಟ್ರೋಲಿಯಂ ಕಾಪೆರ್Çೀರೇಷನ್ ಭ್ರಷ್ಟಾಚಾರವನ್ನು ಅಸ್ತವನ್ನಾಗಿ ಬಳಸಿದೆ. ಈ ನಡುವೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು.

Write A Comment