ರಿಯೊ ಡಿ ಜನೈರೊ (ಪಿಟಿಐ): ಭಾರತದ ಜಿಮ್ನಾಸ್ಟಿಕ್ ಸ್ಪರ್ಧಿ ದೀಪಾ ಕುರ್ಮಾಕರ್ ಅವರು ಸೋಮವಾರ ರಿಯೊ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದು, ಭಾರತ ಮಹಿಳಾ ಜಿಮ್ನಾಸ್ಟಿಕ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇಲ್ಲಿನ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ 22 ವರ್ಷದ ದೀಪಾ ಆರ್ಟಿಸ್ಟಿಕ್ ವಿಭಾಗದಲ್ಲಿ ಒಟ್ಟು 52.698 ಪಾಯಿಂಟ್ಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
52 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಒಲಿಂಪಿಕ್ಸ್ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಇದುವರೆಗೂ ಭಾರತದ ಯಾವುದೇ ಮಹಿಳೆ ಸ್ಪರ್ಧಿಸಿಲ್ಲ.
ದೇಶಕ್ಕೆ ಸ್ವತಂತ್ರ ಲಭಿಸಿದಾಗಿನಿಂದ ಈತನಕ ಭಾರತದ ಒಟ್ಟು 11 ಪುರುಷ ಜಿಮ್ನಾಸ್ಟ್ಗಳು ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 1952ರಲ್ಲಿ ಇಬ್ಬರು, 1956ರಲ್ಲಿ ಮೂವರು ಹಾಗೂ 1964ರಲ್ಲಿ ಆರು ಜನರು ಸ್ಪರ್ಧಿಸಿದ್ದರು. ಆದರೆ, ಈವರೆಗೂ ಭಾರತ ಯಾವುದೇ ಮಹಿಳಾ ಸ್ಪರ್ಧಿ ಈ ಸಾಧನೆ ಮಾಡಿರಲಿಲ್ಲ.
ದೀಪಾ ಅರ್ಹತೆ ಪಡೆದಿರುವ ವಿಷಯವನ್ನು ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ ಫೆಡರೇಷನ್ ಖಚಿತ ಪಡಿಸಿದೆ.
ವೈಯಕ್ತಿಕ ಅರ್ಹತಾ ಟೂರ್ನಿಯ ಮಹಿಳಾ ಆರ್ಟಿಸ್ಟಿಕ್ ಜಿಮ್ಯಾಸ್ಟ್ ಪಟ್ಟಿಯಲ್ಲಿ ದೀಪಾ ಅವರು 79ನೇ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ದೀಪಾ ಗಳಿಸಿದ ಪಾಯಿಂಟ್ಸ್ಗಳ ಲೆಕ್ಕ:
ವಾಲ್ಟ್– 15.066
ಅನ್ ಇವನ್ ಬಾರ್ಸ್ –11.700
ಬೀಮ್–13.366
ಫ್ಲೋರ್ ಎಕ್ಸರ್ಸೈಜ್ – 12.566
ಮನೋರಂಜನೆ