ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2014-15ನೇ ಶೈಕ್ಷಣಿಕ ಸಾಲಿನ ಅಂತರ್ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ -1(500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು)ರಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ.

ಶಿಖರದ ಸಂಪಾದಕ ಬಳಗ
ಪ್ರಧಾನ ಸಂಪಾದಕರಾಗಿ ಸೀಮಾ ಪಿ. ಶೆಟ್ಟಿ, ನಿರ್ವಾಹಕ ಸಂಪಾದಕರಾಗಿ ಕನ್ನಡ ವಿಭಾಗದ ಮುಖ್ಯಸ್ಥ ಕೆ. ಚೇತನ್ ಕುಮಾರ್ ಶೆಟ್ಟಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಸ್ಪೂರ್ತಿ ಎಸ್. ಫೆರ್ನಾಂಡಿಸ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದೀಪಾ, ಇಂಗ್ಲೀಷ್ ಉಪನ್ಯಾಸಕಿ ಅನಿತಾ ಆಲಿಸ್ ಡಿಸೋಜಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನ್ವಿತಾ.

ವಿದ್ಯಾರ್ಥಿ ಸಂಪಾದಕ ಬಳಗ
ತೃತೀಯ ಬಿ.ಕಾಂ. ‘ಎ’ ವಿಭಾಗದ ಗಣೇಶ್ ಶೆಟ್ಟಿ, ತೃತೀಯ ಬಿಕಾಂ ‘ಬಿ’ ವಿಭಾಗದ ಸುಚೇತನ್, ತೃತೀಯ ಬಿ.ಕಾಂ ‘ಎ’ ವಿಭಾಗದ ದಿವ್ಯಾ, ತೃತೀಯ ಬಿ.ಕಾಂ ‘ಬಿ’ ವಿಭಾಗದ ಶೆರುಲ್ ಮ್ಯಾಥ್ಯೂ ನಜರೇತ್, ದ್ವಿತೀಯ ಬಿ.ಕಾಂ ‘ಬಿ’ ವಿಭಾಗದ ಶಿವಪ್ರಸಾದ್ ಆಚಾರ್, ದ್ವಿತೀಯ ಬಿ.ಬಿ.ಎಂ. ನ ಓಶಿನ್ ಪೂಮಾ ಡಿಸೋಜಾ, ಪ್ರಥಮ ಬಿ.ಕಾಂ ‘ಎ’ ವಿಭಾಗದ ರಕ್ಷಿತ್, ಪ್ರಥಮ ಬಿ.ಕಾಂ. ‘ಎ’ ವಿಭಾಗದ ಆಶಾ ಶೆಟ್ಟಿ.
ಸಂಚಿಕೆಗೆ ಪ್ರಥಮ ಸ್ಥಾನ ಬಂದ ಬಗ್ಗೆ ಗೌರವ ಸಲಹೆಗಾರ ಬಿ.ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.