
ಪುತ್ತೂರು: ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಪ್ಪಳ ನಿವಾಸಿ ಅಬ್ದುಲ್ ಆಸೀರ್ (21) ಎಂದು ಗುರುತಿಸಲಾಗಿದೆ.
ಪುತ್ತೂರಿನ ಮುಖ್ಯ ರಸ್ತೆಯ ಸಿ.ಪಿ.ಸಿ. ಪ್ಲಾಝಾದ ಪ್ರಥಮ ಮಹಡಿಯಲ್ಲಿರುವ ರಾಜಧಾನಿ ಜುವೆಲ್ಲರ್ಸ್ ಗೆ ಕಳೆದ ವರ್ಷ ಅಕ್ಟೋಬರ್ 6 ರಂದು ರಾತ್ರಿ ವೇಳೆ ಗುಂಡಿನ ದಾಳಿ ನಡೆದಿತ್ತು.