
ಬೆಂಗಳೂರು: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಮದುವೆ ನಗರದ ದೇವನಹಳ್ಳಿ ಫಾರ್ಮ್ಹೌಸ್ನಲ್ಲಿ ಅದ್ದೂರಿಯಾಗಿ ನಡೀತು.
ಹಿರಿಯರ ಸಮ್ಮುಖದಲ್ಲಿಬಾಲ್ಯದ ಗೆಳೆಯ ಕಲ್ಯಾಣ್ ಜೊತೆ ಶ್ರೀಜಾ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ರು. ಕಳೆದ ಮೂರು ದಿನಗಳಿಂದ ಮದುವೆಯ ಶಾಸ್ತ್ರಗಳನ್ನು ನಡೆಸಲಾಗಿತ್ತು. ಒಂದು ಎಕರೆ ಪ್ರದೇಶದಲ್ಲಿ ವಿದ್ಯುತ್ ದೀಪಾಲಂಕಾರದೊಂದಿಗೆ ವಿಜೃಂಭಣೆಯಿಂದ ಮದುವೆ ನಡೆಯಿತು.
ಈ ಮದುವೆಗೆ ಕುಟುಂಬ ಸದಸ್ಯರು ಮತ್ತು ವಿಶೇಷ ಆಹ್ವಾನಿತರು ಭಾಗಿಯಾಗಿದ್ರು. ರೆಬೆಲ್ ಸ್ಟಾರ್ ಅಂಬರೀಷ್ ದಂಪತಿ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಪುನೀತ್ರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಗಣ್ಯಾತಿಗಣ್ಯರು ಕೂಡ ಹಾಜರಾಗಿದ್ರು.
ಹೈದರಾಬಾದ್ನ ಹಯಾತ್ ಹೋಟೆಲ್ನಲ್ಲಿ ಗುರುವಾರ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಶ್ರೀಜಾ ಈ ಹಿಂದೆಯೇ ಪ್ರೇಮವಿವಾಹವಾಗಿದ್ದರೂ ವಿಚ್ಛೇದನ ಪಡೆದಿದ್ರು.