ಮುಂಬೈ (ಪಿಟಿಐ): ಇಶ್ರತ್ ಜಹಾಂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ನೀಡಿದ ಹೇಳಿಕೆಯನ್ನು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಅಲ್ಲಗಳೆದಿದ್ದಾನೆ.
‘ಎನ್ಐಎ’ ಸೂಚನೆಯಂತೆ ಇಶ್ರತ್ ಜಹಾಂ ಹೆಸರು ಹೇಳಲಾಗಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಹೆಡ್ಲಿ, ಎಲ್ಇಟಿಯಲ್ಲಿ ‘ಮಹಿಳಾ ವಿಭಾಗ’ ಮತ್ತು ‘ಮಹಿಳಾ ಆತ್ಮಹತ್ಯಾ ದಳ’ ಕಾರ್ಯಾಚರಿಸುತ್ತಿದ್ದ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾನೆ.
‘ಇಶ್ರತ್ ಜಹಾಂ ಎಲ್ಇಟಿಯ ಮಹಿಳಾ ಆತ್ಮಹತ್ಯಾ ಬಾಂಬರ್’ ಎಂದು ಹೆಡ್ಲಿ ಈ ಹಿಂದೆ ವಿಚಾರಣೆ ವೇಳೆ ತಿಳಿಸಿದ್ದ.