ಮುಂಬೈ (ಪಿಟಿಐ): ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ತಾನು ಬಾಲ್ಯದಿಂದಲೇ ಭಾರತವನ್ನು, ಭಾರತೀಯರನ್ನು ದ್ವೇಷಿಸುತ್ತಿದೆ ಎಂದು ಹೇಳಿಕೊಂಡಿದ್ದಾನೆ.
ಅಮೆರಿಕದ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಬೈನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಹೆಡ್ಲಿ ಈ ಅಂಶ ಬಿಚ್ಚಿಟ್ಟಿದ್ದಾನೆ.
‘1971ರಲ್ಲಿ ಭಾರತೀಯ ಸೇನೆಯ ವಿಮಾನಗಳು ನಮ್ಮ ಶಾಲೆಯ ಮೇಲೆ ಬಾಂಬ್ ದಾಳಿ ಮಾಡಿದ್ದವು. ಅಂದಿನ ದಾಳಿಯಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದರು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಆಗಿನಿಂದಲೇ ಭಾರತದ ಬಗ್ಗೆ ದ್ವೇಷ ಬೆಳೆಸಿಕೊಳ್ಳತೊಡಗಿದೆ’ ಎಂದು ಹೆಡ್ಲಿ ತಿಳಿಸಿದ್ದಾನೆ.
‘ಭಾರತ ಮತ್ತು ಭಾರತೀಯರಿಗೆ ಹೆಚ್ಚಿನ ಹಾನಿ ಮಾಡಬೇಕೆಂದು ಬಾಲ್ಯದಲ್ಲೇ ನಿರ್ಧರಿಸಿದ್ದೆ. ಲಷ್ಕರ್–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆ ಸೇರಲು ಇದೂ ಒಂದು ಮುಖ್ಯ ಕಾರಣ’ ಎಂದು ಆತ ಹೇಳಿದ್ದಾನೆ.
ಮುಂಬೈ