ಮನೋರಂಜನೆ

ಕೂಲ್ ಕ್ಯಾಪ್ಟನ್ ಧೋನಿಗಿಂತ ಕೊಹ್ಲಿ ಬ್ಯಾಟ್‌ಗೆ ಹೆಚ್ಚು ಡಿಮ್ಯಾಂಡ್‌ ! ಕೊಹ್ಲಿ ತಮ್ಮ ಬ್ಯಾಟಿನ ಮೇಲೆ ಎಂಆರ್‌ಎಫ್‌ ಸ್ಟಿಕರ್‌ ಹಾಕಿದ್ದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ…?

Pinterest LinkedIn Tumblr

Nagpur: Indian batsman Virat Kohli  celebrates  century during their 6th ODI cricket match against  Australia in Nagpur on Wednesday. PTI Photo by Shashank Parade(PTI10_30_2013_000298B)

ನವದೆಹಲಿ: ಟೀಂ ಇಂಡಿಯಾ ಉಪನಾಯಕ ಕೊಹ್ಲಿ ಬ್ರ್ಯಾಂಡ್‌ ಧೋನಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದೆ. ದೇಶದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ಹೆಸರು ಧೋನಿ ಬ್ರ್ಯಾಂಡ್‌ಗಿದೆ.

ಮಹೇಂದ್ರ ಸಿಂಗ್ ಧೋನಿ ತಮ್ಮ ಬ್ಯಾಟಿನ ಮೇಲೆ ಸ್ಪಾರ್ಟನ್‌ ಸ್ಟಿಕ್ಕರ್‌ ಹಾಕಿಸಿಕೊಳ್ಳಲು 6 ಕೋಟಿ ರು. ಪಡೆಯುತ್ತಾರೆ. ಆದರೆ, ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿನ ಮೇಲೆ ಎಂಆರ್‌ಎಫ್‌ ಸ್ಟಿಕರ್‌ಗೆ 8 ಕೋಟಿ ರು. ಸಂಭಾವನೆ ಪಡೆಯುತ್ತಿದ್ದಾರೆ.

ಇದಲ್ಲದೆ ಕ್ರೀಡಾಂಗಣದಲ್ಲಿ ಶೂ ಮತ್ತು ಉಡುಪು ಧರಿಸಲು ದೆಹಲಿಯ ಈ ಆಟಗಾರ 2 ಕೋಟಿ ರೂ. ಪಡೆಯುತ್ತಾರೆ. ಇನ್ನುಳಿದಂತೆ ಭಾರತದ ಸುರೇಶ್‌ ರೈನಾ, ರೋಹಿತ್‌ ಶರ್ಮಾ, ಶಿಖರ್‌ ಧವನ್‌ ತಮ್ಮ ಬ್ಯಾಟಿನಿಂದ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ.

ವಿದೇಶಿ ಆಟಗಾರರಿಗಿಂತ ಭಾರತೀಯ ಕ್ರಿಕೆಟ್ ಆಟಗಾರರು ತಮ್ಮ ಬ್ಯಾಟ್ ನಿಂದ ಹೆಚ್ಚು ಹಣ ಗಳಿಸುತ್ತಾರಂತೆ. ಏಕೆಂದರೇ ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಬ್ರ್ಯಾಂಡ್ ಫಾಲೋ ಮಾಡುವಲ್ಲಿ ಭಾರತೀಯರು ಮೊದಲಿಗರಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ ತಮ್ಮ ಬ್ಯಾಟ್‌ನಿಂದ 3.5 ಕೋಟಿ ರೂ. ಸಂಭಾವಣೆ ಪಡೆಯುತ್ತಾರಂತೆ. ಇನ್ನು ವೆಸ್ಟ್‌ ವಿಂಡೀಸ್‌ನ ಕ್ರಿಸ್‌ ಗೇಲ್‌ ತಮ್ಮ ಬ್ಯಾಟ್‌ನಿಂದ 3 ಕೋಟಿ ಹಣ ಬಾಚಿಕೊಳ್ಳುತ್ತಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Write A Comment