ಮನೋರಂಜನೆ

ರಜನಿಯ ‘ಎಂದಿರನ್ 2.0’ ಚಿತ್ರಕ್ಕೆ 330 ಕೋಟಿ. ರೂ ವಿಮೆ ..!

Pinterest LinkedIn Tumblr

endiಚೆನ್ನೈ, ಮಾ.20 : ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಎಂದಿರನ್ 2.0’ ಚಿತ್ರ ಹೊಸ ದಾಖಲೆಯೊಂದನ್ನು ಬರೆದಿದೆ. 330 ಕೋಟಿ ರೂ. ಇನ್ಶೂರೆನ್ಸ್ ಮಾಡಿಸುವ ಮೂಲಕ ‘ಎಂದಿರನ್ 2.0’ ದಾಖಲೆ ನಿರ್ಮಿಸಿದೆ! ಈ ಹಿಂದೆ ಆಮೀರ್ ಖಾನ್ ನಟನೆಯ ‘ಪಿಕೆ’ ಚಿತ್ರ 300 ಕೋಟಿ ರೂ. ವಿಮೆ ಮಾಡಿಸುವ ಮೂಲಕ ದಾಖಲೆ ಬರೆದಿತ್ತು.

ಇದೀಗ ‘ಎಂದಿರನ್ 2.0’ ಆ ದಾಖಲೆಯನ್ನೆಲ್ಲ ಮುರಿದಿದೆ. ಚಿತ್ರೀಕರಣ ಮತ್ತಿತರ ಸಂದರ್ಭಗಳಲ್ಲಿ ಉಂಟಾಗುವ ಅವಘಡಗಳಿಂದ ಚಿತ್ರಕ್ಕೆ ಆಗಬಹುದಾದ ನಷ್ಟ ತಪ್ಪಿಸಲು ಈ ರೀತಿ ವಿಮೆ ಮೊರೆ ಹೋಗಿದೆ ಚಿತ್ರತಂಡ.

ಒಟ್ಟು 350 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಕಲಾವಿದರಿಗೆ (ರಜನಿಕಾಂತ್, ಅಕ್ಷಯ್‌ಕುಮಾರ್, ಆಮಿ ಜಾಕ್ಷನ್) ನೀಡುವ ಸಂಭಾವನೆಯ ಮೊತ್ತವೇ 150 ಕೋಟಿ ರೂ. ಮೀರಿದೆಯಂತೆ! ಈ ಚಿತ್ರ ತೆರೆಕಾಣಲು ಇನ್ನೂ ಒಂದು ವರ್ಷವಾದರೂ ಬೇಕು.

Write A Comment