ಕುಂದಾಪುರ: ಬಹಳ ಪುರಾತನ ಚಾರಿತ್ರ್ಯದ ಕುಂದಾಪುರ ರೊಜಾರಿ ಮಾತೆಯ ಇಗರ್ಜಿಯಲ್ಲಿ ಗರಿಗಳ ಭಾನುವಾರ ಹಬ್ಬ ವನ್ನು ಬಹಳ ಭಕ್ತಿ ಪೂಜೆಯಿಂದ ಆಚರಿಸಲಾಯಿತು.

ಈ ಧಾರ್ಮಿಕ ಕಾರ್ಯಕ್ರಮದ ನೇತ್ರತ್ವವನ್ನು ಬೆಂಗಳೂರಿನ ಧರ್ಮಗುರು ವ|ಐವನ್ ಡಿಸಿಲ್ವಾ ವಹಿಸಿದ್ದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವ|ಅನೀಲ್ ಡಿಸೋಜಾ ಪ್ರವಚನ ನೀಡಿದರು. ಪ್ರಾಂಶುಪಾಲ ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಧರ್ಮಗುರು ವ|ಪಾವ್ಲ್ ಪ್ರಕಾಶ್ ಮತ್ತು ಬಹಳಸ್ಟು ಭಕ್ತಾದಿಗಳು ಈ ಪವಿತ್ರವಾದ ಆಚರಣೆಯಲ್ಲಿ ಪಾಲುಗೊಂಡರು.
ಚಿತ್ರ: ಬರ್ನಾಡ್ ಡಿ’ಕೋಸ್ತಾ