
ಜಲೌನ್: ಹೆತ್ತ ಮಗಳ ಮೇಲೆಯೇ 4 ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ಮಾಡಿ ಅಮಾಯಕನಂತೆ ವರ್ತಿಸುತ್ತಿದ್ದ ಕಾಮುಕ ತಂದೆಯನ್ನು ಕೊನೆಗೂ ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಹೆಣ್ಣು ಮಗಳನ್ನು ಕಾಮದ ಕಣ್ಣಿನಿಂದ ನೋಡುತ್ತಿದ್ದ ತಂದೆಯೊಬ್ಬ 4 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಯುವತಿ ಈ ವಿಷಯವನ್ನು ತನ್ನ ತಾಯಿ ಬಳಿ ಹೇಳಿಕೊಂಡಿದ್ದರೂ. ಇದನ್ನು ಆಕೆ ನಂಬಿರಲಿಲ್ಲ. ಹೀಗಾಗಿ ತನ್ನ ಗೆಳತಿಯ ಸಹಾಯದಿಂದ ಅತ್ಯಾಚಾರವೆಸಗುವ ದೃಶ್ಯವನ್ನು ಚಿತ್ರೀಕರಣ ಮಾಡಿಕೊಂಡಿದ್ದಳು. ವಿಡಿಯೋವನ್ನು ತನ್ನ ತಾಯಿಗೆ ತೋರಿಸಿದ ಬಳಿಕ ತಂದೆಗೆ ಶಿಕ್ಷೆಯಾಗಬೇಕೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕಾಮುಕ ತಂದೆಯನ್ನು ಬಂಧನಕ್ಕೊಳಪಡಿಸಿದ್ದಾರೆ.ಇದೀಗ ಕಾಮುಕ ತಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕಂಬಿ ಎಣಿಸುತ್ತಿದ್ದಾನೆ.
ನನ್ನ ತಂದೆ ಕಳೆದ 4 ವರ್ಷಗಳಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ವಿಷಯವನ್ನು ನನ್ನ ತಾಯಿ ಬಳಿ ಹೇಳಿಕೊಂಡಾಗ ಆಕೆ ನನ್ನ ಮಾತನ್ನು ನಂಬುತ್ತಿರಲಿಲ್ಲ. ಹೀಗಾಗಿ ಗೆಳೆತಿಯ ಸಹಾಯದಿಂದ ವಿಡಿಯೋ ಮಾಡಿಕೊಂಡಿದ್ದೆ. ನನ್ನ ತಂದೆ ಶಿಕ್ಷೆಯಾಗಬೇಕು ಎಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.