
ಬೆಂಗಳೂರು: ಪಾಗಲ್ ಪ್ರೇಮಿಯ ಹುಚ್ಟಾಟಕ್ಕೆ ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿ ಬಲಿಯಾಗಿದ್ದಾಳೆ. ಪ್ರೀತಿಸು ಎಂದು ಕಾಡುತ್ತಿದ್ದ ಯುವಕನ ಕಾಟ ತಾಳಲಾರದೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾಳೆ.
ಹದಿನೈದು ವರ್ಷದ ಸೌಂದರ್ಯ ಬಲಿಯಾದ ಯುವತಿ. ಸೌಂದರ್ಯ ಜೆ.ಜೆ ನಗರದ ಜನತಾ ಕಾಲೋನಿಯಲ್ಲಿ ತಾಯಿ ಹಾಗೂ ಅಜ್ಜಿ ಜೊತೆ ವಾಸವಿದ್ದಳು. ಆದರೆ ಪ್ರವೀಣ್ ಎನ್ನುವ ಯುವಕ ಕೆಲ ದಿನಗಳಿಂದ ಪ್ರೀತ್ಸೆ ಪ್ರೀತ್ಸೆ ಎಂದು ಸೌಂದರ್ಯಳ ಹಿಂದೆ ಬಿದ್ದಿದ್ದ. ಕಳೆದ ಗುರುವಾರ ಬೆಳ್ಳಗ್ಗೆ ಸೌಂದರ್ಯ ಎಂದಿನಂತೆ ಶಾಲೆಗೆ ಹೂರಟಿದ್ದಾಗ ಪ್ರವೀಣ್ ಬೈಕ್ನಲ್ಲಿ ಬಂದು ತನ್ನನ್ನು ಪ್ರೀತಿ ಮಾಡು ಇಲ್ಲದಿದ್ರೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಸಿದ್ದ.
ಇದರಿಂದ ಭಯಗೊಂಡ ಸೌಂದರ್ಯ, ಮನೆಗೆ ಬಂದು ಸೀಮೆ ಎಣ್ಣೆ ಸುರಿದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಸೌಂದರ್ಯಳ ಕಿರುಚಾಟ ಕೇಳಿದ ಸ್ಥಳೀಯರು ಆಕೆಯನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ತಡ ರಾತ್ರಿ ಸಾವನ್ನಪಿದ್ದಾಳೆ.
ಈ ಸಂಬಂಧ ಆರೋಪಿ ಪ್ರವೀಣ್ನನ್ನು ಜೆ.ಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು.