
ಝಾನ್ಸಿ: ತಂದೆಯಿಂದಲೇ ನಾಲ್ಕು ವರ್ಷಗಳಿಂದ ಅತ್ಯಾಚಾರಕ್ಕೊಳಗಾಗಿದ್ದ ಮಗಳೊಬ್ಬಳು ಪೊಲೀಸರು ಸಾಕ್ಷ್ಯ ಕೇಳಿದ್ದಕ್ಕೆ, ವಿಡಿಯೋ ಕ್ಲಿಪ್ ತಂದು ಕೊಟ್ಟ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ತನ್ನ ಮೇಲೆ ಸತತ ನಾಲ್ಕು ವರ್ಷಗಳಿಂದ ತನ್ನ ತಂದೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಆದರ ತಾವು ದೂರು ತೆಗೆದುಕೊಳ್ಳಲು ಸಾಕ್ಷಿ ಬೇಕು ಎಂದು ಪೊಲೀಸರು ಹೇಳಿ ವಾಪಸ್ ಕಳುಹಿಸಿದ್ದಾರೆ. ನಂತರ ತನ್ನ ಸ್ನೇಹಿತೆಯ ಸಹಾಯದಿಂದ ತನ್ನ ತಂದೆ ಮಾಡುತ್ತಿದ್ದ ಕೃತ್ಯದ ಬಗ್ಗೆ ವಿಡಿಯೋ ಮಾಡಿ ತಂದು ಪೊಲೀಸರಿಗೆ ಒಪ್ಪಿಸಿದ್ದಾಳೆ, ವಿಡಿಯೋ ವನ್ನು ಸಾಕ್ಷಿಯಾಗಿ ಪರಿಗಣಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇನ್ನು ತನ್ನ ತಂದೆಯ ಪಾಪಕೃತ್ಯದ ಕುರಿತು ತಾಯಿ ಬಳಿ ಹೇಳಿಕೊಂಡಿದ್ದರು ಆಕೆ ನಂಬಿರಲಿಲ್ಲ. ಜೊತೆಗೆ ಸಂಬಂಧಿಕರ ಬಳಿ ಹಲವಾರು ಬಾರಿ ಹೇಳಿಕೊಂಡಿದ್ದರೂ ಏನು ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವೇಳೆ ವಿಡಿಯೋ ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾಳೆ.
ತಂದೆಯ ಕಾಮಕ್ರೀಡೆಯಿಂದ ಬೇಸತ್ತ ಅತ್ಯಾಚಾರ ಪೀಡಿತೆ ಈ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆದರೆ ತನ್ನ ಗೆಳತಿಯ ಮನವೊಲಿಕೆಯಿಂದ ಆತ್ಮಹತ್ಯೆ ನಿರ್ಧಾರದಿಂದ ಯುವತಿ ಹಿಂದೆ ಸರಿದಿದ್ದಳು.