
ಮೈಸೂರು: ಹೆಸರಾಂತ ಕೊಳಲು ವಾದಕ ಎ ವಿ ಪ್ರಕಾಶ್ ಅವರು ಹೃದಯಾಘಾತದಿಂದ ನಿಧರಾಗಿದ್ದಾರೆ. 74 ವರ್ಷದ ಪ್ರಕಾಶ್ ಅವರು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕಾದರೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.
ಹೃದಯಾಘಾತವಾಗುತ್ತಿದ್ದಂತೆ ತಮ್ಮ ಸಹಚರರಿಗೆ ಕಾರ್ಯಕ್ರಮವನ್ನು ನಿಲ್ಲಿಸದೇ, ಮುಂದುವರೆಸುವಂತೆ ಮನವಿ ಮಾಡಿದ್ದರು ಎಂದು ಅವರು ಆಪ್ತರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಅನೇಕೆರೆಯಲ್ಲಿ ಜನಸಿದ ಪ್ರಕಾಶ್ ಅವರು ಹೆಸರಾಂತ ಎನ್ ರಮಣಿ ಅವರು ಶಿಷ್ಯರಾಗಿದ್ದವರು. 1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋಳಲು ವಾದನ ತರಬೇತಿ ನೀಡಿದ್ದಾರೆ. ಸಂಗೀತಕ್ಕೆ ಅವರು ನೀಡಿದ ಕೊಡುಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.